ಹೈದರಾಬಾದ್:ರಷ್ಯಾ ಅಭಿವೃದ್ಧಿಪಡಿಸಿರುವ ಕೋವಿಡ್–19 ವಿರುದ್ಧದ ಲಸಿಕೆ ‘ಸ್ಪುಟ್ನಿಕ್ ವಿ’ ಪ್ರತಿ ಡೋಸ್ಗೆ ₹995 ನಿಗದಿಪಡಿಸಲಾಗಿದ್ದು, ಮುಂದಿನ ಕೆಲ ತಿಂಗಳಲ್ಲಿ 3.6 ಕೋಟಿ ಡೋಸ್ಗಳು ಲಭ್ಯವಾಗುವ ನಿರೀಕ್ಷೆ ಇದೆ.

ಲಸಿಕೆಗೆ ₹948 ಮತ್ತು ಶೇಕಡ 5ರಷ್ಟು ಜಿಎಸ್ಟಿ ನಿಗದಿಪಡಿಸಲಾಗಿದೆ. ಇದರಿಂದಾಗಿ ₹995 ದರ ನಿಗದಿಯಾಗಿದೆ. ಮುಂದಿನ ದಿನಗಳಲ್ಲಿ ಈ ದರ ಇನ್ನೂ ಕಡಿಮೆಯಾಗಬಹುದು ಎಂದು ಈ ಲಸಿಕೆಯನ್ನು ಭಾರತದಲ್ಲಿ ತಯಾರಿಸುತ್ತಿರುವ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ತಿಳಿಸಿದೆ.

‘ಸ್ಫುಟ್ನಿಕ್ ವಿ’ ಲಸಿಕೆಯ ಮೊದಲ ಡೋಸ್ ಅನ್ನು ಶುಕ್ರವಾರ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್ ಸಪ್ರಾ ಅವರಿಗೆ ಹಾಕುವ ಮೂಲಕ ಚಾಲನೆ ನೀಡಲಾಯಿತು.

‘ಮೇ 1ರಂದು ಮೊದಲ ಹಂತದ ಭಾಗವಾಗಿ ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ (ಆರ್ಡಿಐಎಫ್) ವತಿಯಿಂದ 1.5 ಲಕ್ಷ ಡೋಸ್ಗಳನ್ನು ಸ್ವೀಕರಿಸಲಾಗಿದೆ. ಕೇಂದ್ರೀಯ ಔಷಧ ಪ್ರಯೋಗಾಲವು ಇದಕ್ಕೆ ಅನುಮೋದನೆ ನೀಡಿದೆ’ ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ನ ಸಿಇಒ ಎಂ.ವಿ. ರಮನ್ ತಿಳಿಸಿದ್ದಾರೆ.

‘ಆಮದು ದರದ ಆಧಾರದ ಮೇಲೆ ಲಸಿಕೆಗೆ ದರ ನಿಗದಿಪಡಿಸಲಾಗಿದೆ. ವಿವಿಧ ರಾಜ್ಯಗಳ ಜತೆ ಕಂಪನಿ ಚರ್ಚೆ ನಡೆಸುತ್ತಿದೆ. ಆರ್ಡಿಐಎಫ್ ಜತೆಯೂ ಸಮಾಲೋಚನೆ ನಡೆಯುತ್ತಿದೆ. ಮುಂದಿನ ಕೆಲ ತಿಂಗಳಲ್ಲಿ 3.6 ಕೋಟಿ ಡೋಸ್ಗಳು ಆರ್ಡಿಎಐಎಫ್ನಿಂದ ಲಭ್ಯವಾಗುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದ್ದಾರೆ.

‘ಸ್ಥಳೀಯವಾಗಿ ಉತ್ಪಾದನೆ ಆರಂಭವಾದರೆ ದರಗಳು ಕಡಿಮೆಯಾಗಬಹುದು. ಈ ಲಸಿಕೆಯನ್ನು ಉತ್ಪಾದಿಸಲು ಆರ್ಡಿಐಎಫ್ ಭಾರತದ ಆರು ಔಷಧ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದೆ’ ಎಂದು ಅವರು ತಿಳಿಸಿದ್ದಾರೆ.

‘ಜೂನ್ ಮಧ್ಯದ ವೇಳೆಗೆ ಲಸಿಕೆ ಮಾರಾಟಕ್ಕೆ ಲಭ್ಯವಾಗಬಹುದು. ಲಸಿಕೆ ಪೂರೈಕೆ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜತೆಯೂ ಚರ್ಚೆ ನಡೆದಿದೆ’ ಎಂದು ಅವರು ತಿಳಿಸಿದ್ದಾರೆ.

‘ಆರಂಭದಲ್ಲಿ 35 ನಗರಗಳಲ್ಲಿ ಲಸಿಕೆ ಲಭ್ಯವಾಗಲಿದೆ. ಸ್ಪುಟ್ನಿಕ್ ವಿ ಲಸಿಕೆಯನ್ನು ಮೈನಸ್ 18 ಡಿಗ್ರಿ ಸೆಂಟಿಗ್ರೇಡ್ನಲ್ಲಿ ಸಂಗ್ರಹಿಸಿಡಬೇಕಾಗಿರುವುದರಿಂದ ಸಮರ್ಪಕ ಸೌಲಭ್ಯಗಳನ್ನು ಕಲ್ಪಿಸುವುದು ಸಹ ಅಗತ್ಯವಾಗಿದೆ’ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್ ಸಪ್ರಾ ತಿಳಿಸಿದ್ದಾರೆ.

2021ರ ಮಧ್ಯಭಾಗದಲ್ಲಿ ‘ಸ್ಪುಟ್ನಿಕ್ ವಿ’ ಉತ್ಪಾದನೆ ಆರಂಭವಾಗುವ ಸಾಧ್ಯತೆ ಇದೆ. ಈ ಲಸಿಕೆಯ ಎರಡು ಡೋಸ್ಗಳು ಕೋವಿಡ್–19 ವಿರುದ್ಧ ಶೇ 91.6ರಷ್ಟು ಪರಿಣಾಮಕಾರಿ ಎಂದು ವೈಜ್ಞಾನಿಕ ನಿಯತಕಾಲಿಕೆ ‘ದಿ ಲ್ಯಾನ್ಸೆಟ್’ ವರದಿ ಮಾಡಿದೆ.

ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಕೊರತೆ ಕಂಡು ಬಂದಿದ್ದರಿಂದ ‘ಸ್ಪುಟ್ನಿಕ್ ವಿ’ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯವು (ಡಿಸಿಜಿಐ) ಏಪ್ರಿಲ್ನಲ್ಲಿ ಅನುಮೋದನೆ ನೀಡಿತ್ತು.

ಭಾರತಕ್ಕೆ 2.50 ಕೋಟಿ ಡೋಸ್ಗಳನ್ನು ಕಳುಹಿಸುವಂತೆ ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೊರೇಟರಿಸ್, ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ (ಆರ್ಡಿಐಎಫ್) ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಅನ್ವಯ 1600 ಸ್ವಯಂಸೇವಕರ ಮೇಲೆ ಎರಡು ಮತ್ತು ಮೂರನೇ ಹಂತದ ಸ್ಪುಟ್ನಿಕ್–ವಿ ಲಸಿಕೆಯ ಪ್ರಯೋಗಗಳನ್ನು 2020ರ ಸೆಪ್ಟೆಂಬರ್ನಲ್ಲಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.