ಸೋಮವಾರ, ಮಾರ್ಚ್ 1, 2021
19 °C

ಬಿಗಡಾಯಿಸಿದ ಸಂಬಂಧ ಸುಧಾರಣೆಗೆ 8 ಸೂತ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚೀನಾ ಮತ್ತು ಭಾರತದ ನಡುವಿನ ಬಾಂಧವ್ಯವನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಎಂಟು ಅಂಶಗಳಿರುವ ಸಲಹೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮುಂದಿಟ್ಟಿದ್ದಾರೆ.

ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ನಿರ್ವಹಣೆ ಕುರಿತಂತೆ ಎಲ್ಲ ಒಪ್ಪಂದಗಳಿಗೆ ಬದ್ಧರಾಗಿರುವುದು, ಪರಸ್ಪರ ಗೌರವ, ಸೂಕ್ಷ್ಮತೆ ಹಾಗೂ ಏಷ್ಯಾ ಖಂಡದಲ್ಲಿ ಅಭಿವೃದ್ಧಿ ಕುರಿತಂತೆ ಪರಸ್ಪರರ ಆಕಾಂಕ್ಷೆಗಳನ್ನು ಗೌರವಿಸಬೇಕು ಎಂಬುದು ಇದರಲ್ಲಿ ಸೇರಿದೆ.

ಭಾರತ–ಚೀನಾ ಸಂಬಂಧ ಕುರಿತಂತೆ ಆನ್‌ಲೈನ್‌ ಸಮ್ಮೇಳನದಲ್ಲಿ ಮಾತನಾಡಿದ ಜೈಶಂಕರ್ ಅವರು, ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ನಡೆದ ಘಟನೆ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡಿದೆ. ಗಡಿರೇಖೆಯಲ್ಲಿ ಬದಲಾವಣೆ ತರುವ ಯಾವುದೇ ಪ್ರಯತ್ನವೂ ಒಪ್ಪಿತವಲ್ಲ ಎಂದು ಭಾರತದ ನಿಲುವನ್ನು ಅವರು ಸ್ಪಷ್ಟಪಡಿಸಿದರು.

ಗಡಿಯಲ್ಲಿ ಇರುವ ಈಗಿನ ಸ್ಥಿತಿ ಕಡೆಗಣಿಸಬಹುದು ಹಾಗೂ ಜನರ ಬದುಕಿಗೂ ಧಕ್ಕೆಯಾಗದು ಎಂಬ ನಿಲುವು ವಾಸ್ತವವಾಗಿ ಅಷ್ಟು ಸರಳವಾದುದಲ್ಲ. ಪ್ರಸ್ತುತ ಉಭಯ ದೇಶಗಳ ನಡುವಿನ ಬಾಂಧವ್ಯ ಕವಲುದಾರಿಯಲ್ಲಿದೆ. ನಮ್ಮ ಆಯ್ಕೆಗಳು ಈಗ ವಿಶ್ವದ ದೃಷ್ಟಿಯಿಂದ ಆಗಬೇಕಾಗಿದೆ ಎಂದು ಹೇಳಿದರು.

ಈ ದಿನದವರೆಗೂ ಚೀನಾ ಕಡೆಯಿಂದ ಪೂರ್ವ ಲಡಾಖ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೇನೆಯ ನಿಯೋಜನೆ, ನಿಲುವಿನಲ್ಲಿ ಬದಲಾವಣೆ ಕುರಿತಂತೆ ಚೀನಾದಿಂದ ಖಚಿತವಾದ ವಿವರಣೆಯು ಇದುವರೆಗೂ ಲಭ್ಯವಾಗಿಲ್ಲ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು