ಜಾರಿ ನಿರ್ದೇಶನಾಲಯದಿಂದ ‘ಆ್ಯಮ್‌ವೇ ಇಂಡಿಯಾ’ದ ₹757 ಕೋಟಿ ಮೌಲ್ಯದ ಸ್ವತ್ತು ಜಪ್ತಿ

ನವದೆಹಲಿ: ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಬಹು ಹಂತದ ಮಾರುಕಟ್ಟೆ ಯೋಜನೆ ಉತ್ತೇಜನಾ ಕಂಪನಿ (ಎಂಎಲ್‌ಎಂ) ‘ಆ್ಯಮ್‌ವೇ ಇಂಡಿಯಾ’ದ ₹757 ಕೋಟಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ತಿಳಿಸಿದ್ದಾರೆ.
ಜಪ್ತಿ ಮಾಡಿರುವ ಸ್ವತ್ತುಗಳಲ್ಲಿ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿರುವ ಭೂಮಿ ಮತ್ತು ಕಟ್ಟಡ ಸೇರಿದೆ. ಕಂಪನಿಯ ಘಟಕ, ಯಂತ್ರಗಳು, ವಾಹನಗಳು, ಬ್ಯಾಂಕ್ ಖಾತೆಗಳು ಹಾಗೂ ಸ್ಥಿರ ಠೇವಣಿಗಳೂ ಸೇರಿವೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.
ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ನ್ಯಾಯಾಂಗ ಬಂಧನ ಏಪ್ರಿಲ್ 22ರವರೆಗೆ ವಿಸ್ತರಣೆ
ಜಪ್ತಿ ಮಾಡಲಾದ ಒಟ್ಟು ಸ್ವತ್ತಿನ ಪೈಕಿ ₹411.83 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಇದ್ದು, ಉಳಿದಂತೆ ₹345.94 ಕೋಟಿ 36 ಬ್ಯಾಂಕ್ ಖಾತೆಗಳಲ್ಲಿದ್ದ ಮೊತ್ತ ಎಂದು ಇ.ಡಿ. ತಿಳಿಸಿದೆ.
ಕಂಪನಿಯು ಬಹು-ಹಂತದ ಮಾರ್ಕೆಟಿಂಗ್ 'ಹಗರಣ'ವನ್ನು ನಡೆಸುತ್ತಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.