ಮಂಗಳವಾರ, ಅಕ್ಟೋಬರ್ 20, 2020
25 °C

ಚುನಾವಣಾ ಆಯೋಗದಿಂದ ಇಂದು ಸುದ್ದಿಗೋಷ್ಠಿ: ಬಿಹಾರ ಚುನಾವಣೆ, ಉಪಚುನಾವಣೆಗಳು ಘೋಷಣೆ?

‍ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಲು ಸಜ್ಜಾಗಿದೆ. ಈ ಸಂಬಂಧ ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಆಯೋಗ ಪತ್ರಿಕಾಗೋಷ್ಠಿ ಕರೆದಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ.

ದೇಶದ 15 ರಾಜ್ಯಗಳಲ್ಲಿ ಹಲವು ಕಾರಣಕ್ಕೆ ತೆರವಾಗಿರುವ 64 ವಿಧಾನಸಭೆ ಸ್ಥಾನಗಳು ಮತ್ತು ಲೋಕಸಭೆ ಸ್ಥಾನಕ್ಕೆ ನಡೆಯಬೇಕಾದ ಉಪ ಚುನಾವಣೆಯ ವೇಳಾಪಟ್ಟಿಯನ್ನೂ ಆಯೋಗ ಇಂದೇ ಘೋಷಿಸುವ ಸಾಧ್ಯತೆ ಇದೆ. 

ಖಾಲಿ ಇರುವ 64 ವಿಧಾನಸಭಾ ಸ್ಥಾನಗಳಲ್ಲಿ 27 ಸ್ಥಾನಗಳು ಮಧ್ಯಪ್ರದೇಶದಲ್ಲೇ ಇವೆ. 27 ಸ್ಥಾನಗಳ ಪೈಕಿ ಬಹುತೇಕ ಸ್ಥಾನಗಳು ಬಿಜೆಪಿ ಸೇರಲು ಕಾಂಗ್ರೆಸ್‌ ತೊರೆದಿದ್ದ ಶಾಸಕರ ಕ್ಷೇತ್ರಗಳೇ ಆಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು