ಅಹಮದಾಬಾದ್: ಸಾದಿಕ್ ಜಮಾಲ್ ಮೆಹ್ತಾರ್ ಎನ್ಕೌಂಟರ್ ಪ್ರಕರಣದಿಂದ ಮಾಜಿ ಡಿವೈಎಸ್ಪಿ ತರುಣ್ ಬರೋಟ್ ಮತ್ತು ಸಹ ಆರೋಪಿ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಅಹಮದಾಬಾದ್ ವಿಶೇಷ ಸಿಬಿಐ ನ್ಯಾಯಾಲಯ ಕೈಬಿಟ್ಟಿದೆ.

ಈ ಮೂಲಕ ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಂಟು ಪೊಲೀಸರನ್ನು ಪ್ರಕರಣದಿಂದ ಕೈಬಿಟ್ಟಂತಾಗಿದೆ.

’ಎನ್ಕೌಂಟರ್ ಸ್ಪೆಷಲಿಸ್ಟ್’ ಎಂದು ಗುರುತಿಸಿಕೊಂಡಿದ್ದ ಬರೋಟ್ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಸಿಬಿಐ ಆರೋಪಿಸಿತ್ತು. 19 ವರ್ಷದ ಸಾದಿಕ್ ಅವರನ್ನು ಅಕ್ರಮವಾಗಿ ಪೊಲೀಸ್ ವಶಕ್ಕೆ ತೆಗೆದುಕೊಂಡ ಮರುದಿನವೇ ಅವರು ಮೃತಪಟ್ಟಿದ್ದರು ಎಂದು ಸಿಬಿಐ ತಿಳಿಸಿತ್ತು.

‘ನಾನು ಅಮಾಯಕ. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ನನ್ನ ಮೇಲಿರುವ ಪ್ರಕರಣವನ್ನು ಕೈಬಿಡಬೇಕು’ ಎಂದು ಕಳೆದ ಅಕ್ಟೋಬರ್ನಲ್ಲಿ ಬರೋಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಇಷ್ರತ್ ಜಹಾಂ ಎನ್ಕೌಂಟರ್ ಪ್ರಕರಣದಲ್ಲಿಯೂ ಬರೋಟ್ ಆರೋಪಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.