ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರದಿಂದ ಮೇಳ, ಪ್ರದರ್ಶನಗಳಿಗೆ ಅನುಮತಿ ನೀಡಿದ ದೆಹಲಿ ಸರ್ಕಾರ

Last Updated 15 ಸೆಪ್ಟೆಂಬರ್ 2021, 15:38 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19 ಎರಡನೇ ಅಲೆಯ ವೇಳೆ ಹೇರಿಕೆಯಾಗಿದ್ದ ಲಾಕ್‌ಡೌನ್‌ನಿಂದಾಗಿ ಮುಚ್ಚಲಾಗಿದ್ದ ಆರ್ಥಿಕ ಚಟುವಟಿಕೆಗಳನ್ನು ಹಂತ ಹಂತವಾಗಿ ಪುನಃ ತೆರೆಯಲು ಅನುಮತಿ ನೀಡಿರುವ ದೆಹಲಿ ಸರ್ಕಾರವು ಗುರುವಾರದಿಂದ ದೆಹಲಿಯಲ್ಲಿ ಸಾರ್ವಜನಿಕ ಮೇಳಗಳು ಮತ್ತು ಪ್ರದರ್ಶನಗಳಿಗೆ ಅನುಮತಿ ನೀಡಿ ಆದೇಶಿಸಿದೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಬುಧವಾರ ಹೊರಡಿಸಿರುವ ಆದೇಶದಲ್ಲಿ, ನಗರದ ಸಭಾಂಗಣ (ಬ್ಯಾಂಕ್ವೆಟ್‌ ಹಾಲ್‌) ಗಳಲ್ಲಿ ಪ್ರದರ್ಶನಗಳು ಮತ್ತು ಮೇಳಗಳನ್ನು ನಡೆಸಲು ಅನುಮತಿ ನೀಡಲಾಗುವುದು ಎಂದಿದೆ.

'ವ್ಯಾಪಾರ-ಗ್ರಾಹಕ ಪ್ರದರ್ಶನಗಳಿಗೆ ಸೆಪ್ಟೆಂಬರ್ 16 ರಿಂದ ನಗರದಲ್ಲಿ ಅನುಮತಿ ನೀಡಲಾಗುವುದು. ಸಂಘಟಕರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಾಮಾಣಿತ ಕಾರ್ಯವಿಧಾನವನ್ನು (SOP) ಅನುಸರಿಸಬೇಕು ಮತ್ತು ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಶಿಕ್ಷೆ ಅಥವಾ ಕ್ರಿಮಿನಲ್ ಕ್ರಮವನ್ನು ಕೈಗೊಳ್ಳಲಾಗುತ್ತದೆ' ಎಂದಿದೆ.

ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ, ಸ್ವಾಧೀನಕ್ಕೆ ನೀಡುವ ಮೊದಲು ಹಾಲ್‌ಗಳನ್ನು ಸೋಂಕುರಹಿತಗೊಳಿಸುವುದು, ಶಾಶ್ವತ ಐಸೋಲೇಶನ್ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಸೂಕ್ತ ಕಸ ವಿಲೇವಾರಿಯನ್ನು ಒಳಗೊಂಡಿರುವುದು ಸೇರಿದಂತೆ ಸ್ಥಳವನ್ನು ಒದಗಿಸುವವರು ಹಲವಾರು ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.

ಹಾಗೆಯೇ, ಮೇಳದ ಆಯೋಜಕರು ಪ್ರದರ್ಶನದ ಕಾರ್ಯಾಚರಣೆಯ ಸಮಯವನ್ನು ನಿಗದಿಗೊಳಿಸಬೇಕು. ಇದರಿಂದ ಜನಸಂದಣಿಯನ್ನು ತಡೆಯಬಹುದು. ಅಲ್ಲದೆ ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಉತ್ತಮ ಅಭ್ಯಾಸಗಳ ಕುರಿತು ರೆಕಾರ್ಡ್ ಮಾಡಿದ ಸಂದೇಶಗಳನ್ನು ಆಗಾಗ್ಗೆ ಪ್ಲೇ ಮಾಡಬೇಕಾಗುತ್ತದೆ.

ಎಸ್‌ಒಪಿ ಪ್ರಕಾರ, ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಅನ್ನು ಸ್ಟಾಲ್‌ಗಳನ್ನು ನಿರ್ವಹಿಸುವ ಎಲ್ಲ ವ್ಯಕ್ತಿಗಳಿಗೆ ಶಿಫಾರಸು ಮಾಡಲಾಗಿದ್ದು, ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವವರು ಕಡ್ಡಾಯವಾಗಿ ಹಾಕಿಕೊಂಡಿರಬೇಕು.

ಡಿಡಿಎಂಎಯಿಂದ ನಿಷೇಧಿಸಲ್ಪಟ್ಟ ಮತ್ತು ಅನುಮತಿ ನೀಡಿರುವ ಇತರ ಚಟುವಟಿಕೆಗಳು ಸೆಪ್ಟೆಂಬರ್ 30ರ ಮಧ್ಯರಾತ್ರಿಯವರೆಗೂ ಹಾಗೆಯೇ ಇರುತ್ತದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT