ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೆಟಾ ಹಂಚಿಕೊಂಡಿದ್ದ ಟೂಲ್‌ಕಿಟ್‌ಗೆ ಖಲಿಸ್ತಾನಿ ನಂಟು: ದೆಹಲಿಯಲ್ಲಿ ಎಫ್‌ಐಆರ್‌

Last Updated 4 ಫೆಬ್ರುವರಿ 2021, 15:58 IST
ಅಕ್ಷರ ಗಾತ್ರ

ನವದೆಹಲಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ, ಸ್ವೀಡಿಶ್‌ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ 'ಟೂಲ್‌ಕಿಟ್‌' (ರೂಪುರೇಷೆಯ ಕೈಪಿಡಿ) ದಾಖಲೆಯೊಂದಿಗೆ ನಂಟು ಇರುವ ಆರೋಪದ ಮೇಲೆ ದೆಹಲಿ ಪೊಲೀಸರು 'ಅನಾಮಿಕರ' ವಿರುದ್ಧ ಗುರುವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

'ಟೂಲ್‌ಕಿಟ್‌' ದಾಖಲೆ ಮತ್ತು ಖಲಿಸ್ಥಾನ ಹೋರಾಟಗಾರರ ನಡುವೆ ಸಂಬಂಧವಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಗ್ರೆಟಾ ಹಂಚಿಕೊಂಡಿದ್ದ ದಾಖಲೆ
ಗ್ರೆಟಾ ಹಂಚಿಕೊಂಡಿದ್ದ ದಾಖಲೆ

'ಗ್ರೆಟಾ ಥನ್‌ಬರ್ಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆಯೇ,' ಎಂಬ ಪ್ರಶ್ನೆಗೆ ಉತ್ತರಿಸಿರುವ ದೆಹಲಿ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಗ್ರೆಟಾ ಥನ್‌ಬರ್ಗ್‌ ಬುಧವಾರ ಟ್ವೀಟ್‌ ಮಾಡಿದ್ದರು. ಹೋರಾಟವನ್ನು ಬೆಂಬಲಿಸುವವರಿಗಾಗಿ ರೂಪಿಸಲಾದ ದಾಖಲೆ-ಟೂಲ್‌ ಕಿಟ್‌ ಅನ್ನು ಥನ್‌ಬರ್ಗ್‌ ತಮ್ಮ ಟ್ವೀಟ್‌ನಲ್ಲಿ ಲಗತ್ತಿಸಿದ್ದರು.

'ಹೋರಾಟ ಬೆಂಬಲಿಸುವವರಿಗೆ ಇಲ್ಲಿದೆ ಟೂಲ್‌ಕಿಟ್‌' ಎಂದು ಥನ್‌ಬರ್ಗ್‌ ಟ್ವೀಟ್‌ ಮಾಡಿದ್ದರು. ಹೋರಾಟವನ್ನು ಯಾವ ರೀತಿ ಬೆಂಬಲಿಸಬೇಕು ಎಂಬ ಸಲಹೆ ಸೂಚನೆಗಳು ಟೂಲ್‌ಕಿಟ್‌-ದಾಖಲೆಯಲ್ಲಿ ಇದ್ದವು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶೇಷ ಸಿಪಿ (ಅಪರಾಧ) ಪ್ರವೀರ್ ರಂಜನ್, 'ದೆಹಲಿ ಪೊಲೀಸರು 'ಟೂಲ್‌ಕಿಟ್‌' ಎಂಬ ದಾಖಲೆಯನ್ನು ಪರಿಶೀಲಿಸಿದ್ದಾರೆ. ಇದು ದೇಶದಲ್ಲಿ ಸಾಮಾಜಿಕ ಅಶಾಂತಿ ಹರಡುವ ಕ್ರಿಯಾ ಯೋಜನೆಯನ್ನು ಒಳಗೊಂಡಿದೆ. ಕ್ರಿಮಿನಲ್ ಪಿತೂರಿ, ದೇಶದ್ರೋಹದ ಆರೋಪದ ಮೇಲೆ ಅದರ ಲೇಖಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರಂಭಿಕ ತನಿಖೆ ಪ್ರಕಾರ ದಾಖಲೆಗಳಿಗೆ ಖಲಿಸ್ತಾನಿಗಳೊಂದಿಗೆ ಸಂಬಂಧವಿರುವುದು ಗೊತ್ತಾಗಿದೆ,' ಎಂದು ಹೇಳಿದರು.

ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾದ ದಾಖಲೆಗಳಲ್ಲಿ ಜನವರಿ 26 ರಂದು ಅಥವಾ ಅದಕ್ಕೂ ಮೊದಲು ದೇಶದಲ್ಲಿ ಡಿಜಿಟಲ್‌ ದಾಳಿ ನಡೆಸಲು ಕ್ರಿಯಾ ಯೋಜನೆ ರೂಪಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಟ್ರೆಂಡ್‌ ಆದ#GretaThunbergExposed

ಟೂಲ್‌ದಾಖಲೆಗಳನ್ನು ಹಂಚಿಕೊಂಡು ಗ್ರೆಟಾ ಅವರುಭಾರತ ವಿರುದ್ಧದ ಷಡ್ಯಂತ್ರ ಬಹಿರಂಗಪಡಿಸಿದ್ದಾರೆ ಎಂದು ವ್ಯಂಗ್ಯ ಮಾಡಿರುವ ಒಂದು ಗುಂಪು#GretaThunbergExposed ಎಂಬ ಹ್ಯಾಷ್‌ ಟ್ಯಾಗ್‌ ಅನ್ನು ಟ್ವಿಟರ್‌ನಲ್ಲಿ ಟ್ರೆಂಡ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT