ಮುಜಫ್ಫರ್ನಗರ: ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳನ್ನು ಕೆಳಗಿಳಿಸುವುದಾಗಿ ರೈತ ಸಂಘಟನೆಗಳು ಭಾನುವಾರ ಶಪಥ ಮಾಡಿವೆ. ಎರಡೂ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಿ, ಮತ ಹಾಕದೇ ಸೋಲಿನ ರುಚಿ ತೋರಿಸಲು ಸಜ್ಜಾಗಿವೆ.

ಉತ್ತರ ಪ್ರದೇಶ ಮತ್ತು ಅಕ್ಕಪಕ್ಕದ ರಾಜ್ಯಗಳ ಸಾವಿರಾರು ರೈತರು ಇಲ್ಲಿ ನಡೆದ ಬೃಹತ್ ‘ರೈತಮಹಾಪಂಚಾಯಿತಿ’ಯಲ್ಲಿ ಭಾಗಿಯಾಗಿದ್ದರು.ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಈ ಸಮಾವೇಶವನ್ನು ಆಯೋಜಿಸಿತ್ತು.

ಸಮಾವೇಶದಲ್ಲಿ ‘ಮಿಷನ್ ಉತ್ತರ ಪ್ರದೇಶ ಮತ್ತು ಉತ್ತರಾಖಂಡ’ ಕಾರ್ಯಯೋಜನೆ ಪ್ರಕಟಿಸಲಾಯಿತು. ಈ ಎರಡೂ ರಾಜ್ಯಗಳ ಪ್ರತಿ ಜಿಲ್ಲೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಕೋಮು ಗಲಭೆ ನಡೆದ ಎಂಟು ವರ್ಷಗಳ ಬಳಿಕ ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ಸಾವಿರಾರು ರೈತರು ಸಮಾಗಮಗೊಂಡು ಶಕ್ತಿ ಪ್ರದರ್ಶನ ನಡೆಸಿದರು.

ಕೇವಲ ಉದ್ಯಮಿಗಳಿಗೆ ನೆರವು ನೀಡ
ಲಿರುವ ಕೇಂದ್ರದ ಮೂರು ವಿವಾದಾ
ತ್ಮಕ ಕೃಷಿ ಕಾಯ್ದೆಗಳನ್ನು ಖಂಡಿಸಿ ಇದೇ 27ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲು ರೈತರ ಸಂಘಟನೆಗಳು ಇದೇ ವೇಳೆ ನಿರ್ಧರಿಸಿದವು.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ
ಯಿರುವಾಗ ಈ ಸಮಾವೇಶ ನಡೆದಿರು
ವುದು ಗಮನಾರ್ಹ. ರೈತರ ಬೇಡಿಕೆ
ಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಮೋದಿ ಮತ್ತು ಯೋಗಿ ಸರ್ಕಾರಗಳನ್ನು ಶಿಕ್ಷಿಸ
ಬೇಕು ಎಂದು ಸಮಾವೇಶದಲ್ಲಿ ಭಾಗಿಯಾ
ಗಿದ್ದ ಪ್ರತಿಯೊಬ್ಬ ನಾಯಕರೂ ಒತ್ತಾಯಿಸಿದರು.

2013ರ ಕೋಮು ಗಲಭೆ ಬಳಿಕ ಜಾಟ್ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಒಡಕು ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ ಎಂದುಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಆರೋಪಿಸಿದರು. ‘ದೆಹಲಿಯ ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಯಶಸ್ವಿಯಾಗಿ ಮುಗಿಸಿದ ಬಳಿಕವೇ ಮನೆಗೆ ಹಿಂತಿರುಗುವುದಾಗಿ ಶಪಥ ಮಾಡಿದ್ದೇನೆ’ ಎಂದು ಟಿಕಾಯತ್ ಭಾವನಾತ್ಮಕವಾಗಿ ಮಾತನಾಡಿದರು.

‘ಈ ರೀತಿಯ ಸಭೆಗಳು ದೇಶ
ದಾದ್ಯಂತ ನಡೆಯಲಿವೆ. ದೇಶವನ್ನು ಮಾರಾಟ ಮಾಡುವುದನ್ನು ನಾವು ತಡೆಯಬೇಕಿದೆ. ರೈತರನ್ನು, ದೇಶ
ವನ್ನು ಉಳಿಸಬೇಕಿದೆ. ವ್ಯಾಪಾರ, ಉದ್ಯೋಗಿಗಳು ಮತ್ತು ಯುವಕರನ್ನು ಉಳಿಸಬೇಕು ಎಂಬುದು ಈ ಸಮಾವೇಶದ ಉದ್ದೇಶ’ ಎಂದು ಟಿಕಾಯತ್ ಹೇಳಿದರು.

ಸಮಾವೇಶದಲ್ಲಿ ಮೇಧಾ ಪಾಟ್ಕರ್, ಯೋಗೇಂದ್ರ ಯಾದವ್ ಮೊದಲಾದವರು ಭಾಗಿಯಾಗಿದ್ದರು. ‘ಮೋದಿ ಅವರು ದೇಶದ ಮೇಲೆ ನೋಟು ರದ್ದತಿಯನ್ನು ಹೇರಿದ್ದಕ್ಕೆ ಮತ ಹಾಕುವುದಿಲ್ಲ ಎಂಬುದೇ ಉತ್ತರ’ ಎಂದು ಮೇಧಾ ಪಾಟ್ಕರ್ ಹೇಳಿದರು.

ಕರ್ನಾಟಕ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ 300ಕ್ಕೂ ಹೆಚ್ಚು ಸಂಘಟನೆಗಳ ರೈತರು ಈ ಸಮಾವೇಶಕ್ಕೆ ಬಂದಿದ್ದಾರೆ ಎಂದು ಬಿಕೆಯು ಮಾಧ್ಯಮ ವಕ್ತಾರ ಧರ್ಮೇಂದ್ರ ಮಲಿಕ್ ಹೇಳಿದರು. ರೈತರಿ
ಗಾಗಿ ಸುಮಾರು 5 ಸಾವಿರ ಉಪಹಾರ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿತ್ತು.

ಕರ್ನಾಟಕದ ಮಹಿಳಾ ರೈತ ನಾಯಕಿಯೊಬ್ಬರು ಸಭೆಯನ್ನುದ್ದೇಶಿಸಿ ಕನ್ನಡದಲ್ಲಿ ಮಾತನಾಡಿದರು.

ಸಮಾವೇಶಕ್ಕೆ ಬಂದಿದ್ದ ವ್ಯಕ್ತಿಯೊಬ್ಬರುಕಹಳೆ ಊದಿ ಗಮನ ಸೆಳೆದರು. ಈ ಚಿತ್ರವನ್ನು ಕಿಸಾನ್ ಏಕತಾ ಮೋರ್ಚಾ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ‘ಹಿಂದಿನಕಾಲದಲ್ಲಿ ಹೋರಾಟದ ವೇಳೆ ಕಹಳೆ ಊದಲಾಗುತ್ತಿತ್ತು. ಇಂದು ಬಿಜೆಪಿಯ ‘ಕಾರ್ಪೊರೇಟ್ ರಾಜ್’ ವಿರುದ್ಧ ಎಲ್ಲಾ ರೈತ ಸಂಘಟನೆಗಳು ಯುದ್ಧಕ್ಕೆ ಕರೆ ನೀಡಿವೆ’ ಎಂದು ಟ್ವಿಟರ್ನಲ್ಲಿ ಉಲ್ಲೇಖಿಸಿದೆ.

ರೈತ ಮಹಾಪಂಚಾಯಿತಿ ನಡೆಯು
ತ್ತಿರುವ ಮೈದಾನದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲು ಅವಕಾಶ ಕೋರಿ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಮುಖ್ಯಸ್ಥ ಜಯಂತ್ ಚೌಧರಿಯ ಅವರು ಮನವಿ ಮಾಡಿ
ದ್ದರು. ಆದರೆ, ಈ ಮನವಿಯನ್ನು ಜಿಲ್ಲಾಡ
ಳಿತ ನಿರಾಕರಿಸಿತು. ಭದ್ರತಾ ಕಾರಣದಿಂದ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಮತ್ತು ಬಿಜೆಪಿ ಶಾಸಕ ಉಮೇಶ್ ಮಲಿಕ್ ಅವರ ನಿವಾಸಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.