ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲಪ್ರದೇಶ ಚುನಾವಣೆ: ಸೋಲನ್ ಕ್ಷೇತ್ರದಲ್ಲಿ ಮಾವ–ಅಳಿಯನ ಪೈಪೋಟಿ

Last Updated 10 ನವೆಂಬರ್ 2022, 15:10 IST
ಅಕ್ಷರ ಗಾತ್ರ

ಶಿಮ್ಲಾ: ನವೆಂಬರ್ 12ರಂದು ಹಿಮಾಚಲಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ದಿನಾಂಕ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕಣ ರಂಗೇರುತ್ತಿದೆ. ಇಲ್ಲಿನ ಸೋಲನ್ ಮೀಸಲು ಕ್ಷೇತ್ರದಲ್ಲಿ ಅಳಿಯ ಮತ್ತು ಮಾವನ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಈ ಕ್ಷೇತ್ರದ ಕಾಂಗ್ರೆಸ್ ಶಾಸಕ ಧನಿ ರಾಮ್ ಶಾಂಡಿಲ್ ಅವರು, ಬಿಜೆಪಿಯಿಂದ ಸ್ಪರ್ಧಿಸಿರುವ ಅಳಿಯ ರಾಜೇಶ್ ಕಶ್ಯಪ್ ಅವರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.

ಸಹೋದರರು ಪರಸ್ಪರ ಪೈಪೋಟಿ ನಡೆಸಿದ್ದನ್ನು ನೋಡಿದ್ದೇವೆ. ತಂದೆಯ ವಿರುದ್ಧವಾಗಿ ಹೆಣ್ಣುಮಕ್ಕಳು ಸ್ಪರ್ಧಿಸಿದ್ದನ್ನು ನೋಡಿದ್ದೇನೆ. ಇದೀಗ, ಮಾವ ಮತ್ತು ಅಳಿಯನ ಪೈಪೋಟಿ ಎಂದು ಕಶ್ಯಪ್ ಹೇಳಿದ್ದಾರೆ. ಅಲ್ಲದೆ, ಪಕ್ಷದ ಸಿದ್ಧಾಂತವನ್ನು ಇಟ್ಟುಕೊಂಡು ಮತ ಕೇಳುತ್ತಿರುವುದಾಗಿ ಹೇಳಿದ್ದಾರೆ. ಕಳೆದ ವಾರ, ಇದೇ ಕ್ಷೇತ್ರದಲ್ಲೇ ಪ್ರಧಾನಿ ಮೋದಿ ಚುನಾವಣಾ ರ್‍ಯಾಲಿ ನಡೆಸಿದ್ದರು.

2017ರಲ್ಲಿ ಚುನಾವಣೆ ಕಾಂಗ್ರೆಸ್ ಶಾಸಕ ಧನಿ ರಾಮ್ ಶಾಂಡಿಲ್ 671 ಮತಗಳ ಕಡಿಮೆ ಅಂತರದದಲ್ಲಿ ಗೆಲುವು ದಾಖಲಿಸಿದ್ದರು. ಬಹಿರಂಗ ಪ್ರಚಾರ ಅಮತ್ಯಕ್ಕೂ ಕೆಲ ಗಮಟೆಗಳ ಮುನ್ನ, ಶಾಂಡಿಲ್ ಹಲವು ಸಾರ್ವಜನಿಕ ಸಭೆಗಳನ್ನು ನಡೆಸಿದರು. ಅಳಿಯ ಕಶ್ಯಪ್ಪ ಹೆಸರನ್ನುಉಲ್ಲೇಖಿಸಿದೆ ತಪ್ಪಿಯೂ ಬಿಜೆಪಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಬಿಜೆಪಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಇದು ಅವರಿಗೆ ಬುದ್ಧಿ ಕಲಿಸುವ ಸಮಯ ಎಂದು ಹೇಳಿದರು.

84 ವರ್ಷದ ನಿವೃತ್ತ ಕಲೋನಲ್ ಆಗಿರುವ ಶಾಂಡಿಲ್ ಅವರು ಸಂಬಂಧಗಳನ್ನು ಬದಿಗಿಟ್ಟು ಗೆಲುವಿಗಾಗಿ ತೀವ್ರ ಹೋರಾಟ ನಡೆಸುತ್ತಿದ್ದಾರೆ. ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರಾಗಿರುವ ಕಶ್ಯಪ್, ಒಳಚರಂಡಿ ಮತ್ತು ಪಾರ್ಕಿಂಗ್ ಸಮಸ್ಯೆ ಸೇರಿದಂತೆ ನಗರ ವಲಯದ ಸಮಾಜದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT