ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಭಾವನೆಗೆ ಧಕ್ಕೆ: ಫೇಸ್‌ಬುಕ್‌ ಅಧಿಕಾರಿ ಸೇರಿ ಮೂವರ ವಿರುದ್ಧ ಎಫ್‌ಐಆರ್‌

Last Updated 18 ಆಗಸ್ಟ್ 2020, 10:25 IST
ಅಕ್ಷರ ಗಾತ್ರ

ರಾಯಪುರ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದಡಿ ಫೇಸ್‌ಬುಕ್‌ನ ಹಿರಿಯ‌ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಬಳಕೆದಾರರಿಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ರಾಯಪುರ ಮೂಲದ ಪತ್ರಕರ್ತಅವೇಶ್‌ ತಿವಾರಿ ಎಂಬುವರು ಸೋಮವಾರ ರಾತ್ರಿ ಕಬೀರ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಫೇಸ್‌ಬುಕ್‌ ಕಾರ್ಯನಿರ್ವಾಹಕ ಅಧಿಕಾರಿ ಅಂಕಿದಾಸ್, ಬಳಕೆದಾರರಾದ ರಾಮ್‌ ಸಾಹು, ವಿವೇಕ್‌ ಸಿನ್ಹಾ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು , ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಅಜಯ್‌ ಯಾದವ್‌ ತಿಳಿಸಿದರು.

‘ವಾಲ್‌ ಸ್ಟ್ರೀಟ್ ಜರ್ನಲ್‌‌ನಲ್ಲಿ ಪ್ರಕಟವಾದ ಬರಹವೊಂದನ್ನು ನಾನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದೆ. ಆ ಬಳಿಕ ನನಗೆ ಫೇಸ್‌ಬುಕ್‌, ವಾಟ್ಸ್ಯಾಪ್‌‌ ಮೂಲಕ ಜೀವ ಬೆದರಿಕೆಗಳು ಬರುತ್ತಿವೆ’ ಎಂದುಅವರು ದೂರಿನಲ್ಲಿ ಹೇಳಿದ್ದಾರೆ.

ಅಂಕಿದಾಸ್‌ ಕೂಡ ತಾನು ಮಾಡಿದ್ದ ಪೋಸ್ಟ್‌ಗೆ ವಿರುದ್ಧವಾಗಿ ಕಮೆಂಟ್‌ ಮಾಡಿದ್ದಾರೆ. ಇದಕ್ಕೆ ಬಳಕೆದಾರರಿಬ್ಬರು ಬೆಂಬಲ ಸೂಚಿಸಿ, ಅವರು ಹಿಂದೂ. ಹಾಗಾಗಿ ಹಿಂದೂ ಧರ್ಮದ ಪರವಾಗಿ ಮಾತನಾಡುತ್ತಿದ್ದಾರೆ ಎಂದರು. ಅಲ್ಲದೇ ಆರೋಪಿ ಸಾಹು ಕೋಮುಗಲಭೆ ಸೃಷ್ಟಿಸುವಂತಹ ಚಿತ್ರವನ್ನು ಪೋಸ್ಟ್‌ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT