ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಂದ ಅಭಯಾರಣ್ಯದಲ್ಲಿ 20ರಿಂದ ಮೊದಲ ‘ಹಕ್ಕಿ ಹಬ್ಬ‘

ಡಾರ್ಜಿಲಿಂಗ್ ವನ್ಯಜೀವಿ ವಲಯದ ಆಯೋಜನೆ
Last Updated 18 ಜನವರಿ 2021, 6:37 IST
ಅಕ್ಷರ ಗಾತ್ರ

ಕೋಲ್ಕತ್ತ: ಉತ್ಸಾಹಿ ಪರಿಸರ ಪ್ರಿಯರಿಗೆ ಅರಣ್ಯ ಸುತ್ತಾಡುವ ಹಾಗೂ ವಿಭಿನ್ನ ಪಕ್ಷಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸುವುದಕ್ಕಾಗಿ ಪಶ್ಚಿಮ ಬಂಗಾಳದ ಮಹಾನಂದ ಅಭಯಾರಣ್ಯದಲ್ಲಿ ಇದೇ ಮೊದಲ ಬಾರಿಗೆ ‘ಹಕ್ಕಿಗಳ ಹಬ್ಬ‘ವನ್ನು ಆಯೋಜಿಸಲಾಗುತ್ತಿದೆ.

ಡಾರ್ಜಿಲಿಂಗ್ ವನ್ಯಜೀವಿ ವಲಯ ಫೆಬ್ರುವರಿ 20 ರಿಂದ 23ರವರೆಗೆ ‘ಪ್ರಥಮ ಮಹಾನಂದ ಹಕ್ಕಿ ಹಬ್ಬ‘ವನ್ನು ಆಯೋಜಿಸುತ್ತಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಹಕ್ಕಿ ಹಬ್ಬದಲ್ಲಿ ಭಾಗವಹಿಸುವವರನ್ನು ಜನಪ್ರಿಯ ಪಕ್ಷಿಗಳ ತಾಣಗಳಾದ ರೊಂಗ್‌ಡೊಂಗ್‌ ಮತ್ತು ಲತ್‌ಪಂಚೋರ್‌ ಪ್ರದೇಶಗಳಿಗೆ ಕರೆದೊಯ್ಯಲಾಗುತ್ತದೆ. ಇದರ ಜತೆಗೆ ಅರಣ್ಯದೊಳಗಿರುವ ಇತರೆ ಬೇರೆ ಬೇರೆ ಪಕ್ಷಿಗಳು ವಾಸಿಸುವ ತಾಣಗಳನ್ನು ಪರಿಚಯಿಸಲಾಗುತ್ತದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್‌ ವಿ.ಕೆ.ಯಾದವ್ ತಿಳಿಸಿದ್ದಾರೆ.

ಗೈಡ್ ವ್ಯವಸ್ಥೆಯೂ ಇದೆ
‘ಉತ್ಸವದಲ್ಲಿ ಭಾಗವಹಿಸುವವರಿಗೆ ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಕ್ಕಿ ಹಬ್ಬಕ್ಕೆ ಭೇಟಿ ನೀಡುವ ಪ್ರವಾಸಿಗರು ಕಾಡಿನ ನಡುವೆ ಹರಿಯುವ ನದಿ ತೊರೆಗಳನ್ನು ವೀಕ್ಷಿಸಬಹುದು. ಸುಂದರ ಗಿರಿ ಶೃಂಗಗಳು, ಸುಂದರ ಪರಿಸರವನ್ನು ಆಸ್ವಾದಿಸಬಹುದು‘ ಎಂದು ಅವರು ವಿವರಿಸಿದರು.

ಮಹಾನಂದ ವನ್ಯಜೀವಿ ಅಭಯಾರಣ್ಯ ವೈವಿಧ್ಯಮಯ ಪ್ರಾಣಿಗಳಿಂದ ಕೂಡಿದೆ. 300 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿವೆ. ಪಕ್ಷಿಗಳ ಸಂರಕ್ಷಣೆ ಮತ್ತು ಅವುಗಳ ಆವಾಸಸ್ಥಾನದ ರಕ್ಷಣೆ ವಿಷಯದಲ್ಲಿ ಈ ಅಭಯಾರಣ್ಯ ನಿರ್ಣಾಯಕ ಪಾತ್ರವಹಿಸಿದೆ. ಹಾಗಾಗಿ ಇದನ್ನು 'ಪ್ರಮುಖ ಪಕ್ಷಿ ಪ್ರದೇಶ' ಎಂದು ಹೆಸರಿಸಲಾಗಿದೆ.

ಆನ್‌ಲೈನ್ ನೋಂದಣಿ
ಹಕ್ಕಿ ಹಬ್ಬದಲ್ಲಿ ಪಾಲ್ಗೊಳ್ಳುವ ಆಸಕ್ತರು www.wbsfda.org ಲಿಂಕ್‌ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನ ಫೆಬ್ರವರಿ 2.

ಹಕ್ಕಿ ಹಬ್ಬದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೆ ₹5ಸಾವಿರ ಶುಲ್ಕವಿದೆ. ಹೀಗೆ ತೆಗೆದುಕೊಳ್ಳುವ ಹಣದಿಂದ ಪ್ರವಾಸಿಗರಿಗೆ ಪ್ರವೇಶ ಶುಲ್ಕ, ಆಹಾರ ಮತ್ತು ವಸತಿ ವ್ಯವಸ್ಥೆಯಂತಹ ಸೌಲಭ್ಯ ನೀಡಲಾಗುತ್ತದೆ ಎಂದು ವಾರ್ಡನ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT