ಗುರುವಾರ , ಜೂನ್ 24, 2021
25 °C

ವರ್ಷದ ಮೊದಲ ಚಂಡಮಾರುತ ‘ತೌಕ್ತೆ’ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಈ ವರ್ಷದ ಮೊದಲ ಚಂಡಮಾರುತ ಒಂದೆರಡು ದಿನಗಳಲ್ಲಿ ಮಹಾರಾಷ್ಡ್ರ–ಗೋವಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅರಬ್ಬಿ ಸಮುದ್ರದ ವಾಯವ್ಯ ಭಾಗದಲ್ಲಿ ವಾಯುಭಾರ ಕುಸಿಯುವ ಪರಿಣಾಮ ಚಂಡಮಾರುತ ಸೃಷ್ಟಿಯಾಗಲಿದೆ ಎಂದು ಇಲಾಖೆ ಹೇಳಿದೆ.

ಈ ಚಂಡಮಾರುತಕ್ಕೆ ‘ತೌಕ್ತೆ’ ಎಂದು ಹೆಸರಿಸಲಾಗಿದೆ. ಇದು ಮ್ಯಾನ್ಮಾರ್‌ ಭಾಷೆ ಪದವಾಗಿದ್ದು, ‘ಹಲ್ಲಿ’ ಎಂದರ್ಥ.

‘ಇದೇ 14ರಂದು ವಾಯುಭಾರ ಕುಸಿಯುವ ಸಂಭವ ಇದ್ದು,  ಕ್ರಮೇಣ ಚಂಡಮಾರುತವಾಗಿ ಪರಿವರ್ತನೆಗೊಂಡು, ಮೇ 16ರ ವೇಳೆಗೆ ಅರಬ್ಬಿ ಸಮುದ್ರದ ಪೂರ್ವಭಾಗದಲ್ಲಿ ಅಪ್ಪಳಿಸಲಿದೆ’ ಎಂದು ಇಲಾಖೆ ಟ್ವೀಟ್‌ ಮಾಡಿದೆ.

ಮೀನುಗಾರರು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಬಾರದು ಎಂದೂ ಇಲಾಖೆ ಸಲಹೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು