ವಿದೇಶಗಳಿಂದ ಬರುವವರು ಆರ್ಟಿಪಿಸಿಆರ್ಗೆ ಮುಂಗಡ ಕಾಯ್ದಿರಿಸಬೇಕು: ಕೇಂದ್ರ

ನವದೆಹಲಿ: ಕೊರೊನಾ ವೈರಸ್ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ನಿಯಮ ರೂಪಿಸಿದೆ.
ಇದರಂತೆ, ಓಮೈಕ್ರಾನ್ ಪತ್ತೆಯಾಗಿರುವ ದೇಶಗಳಿಂದ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಿಗೆ ಬರುವವರು ಆರ್ಟಿ–ಪಿಸಿಆರ್ ಪರೀಕ್ಷೆಗಾಗಿ ಕಡ್ಡಾಯವಾಗಿ ಮುಂಗಡ ಕಾಯ್ದಿರಿಸಬೇಕಾಗಿದೆ. ಡಿ.20ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ.
ಓದಿ: ದೆಹಲಿಯಲ್ಲಿ ಮತ್ತೆ 4 ಪ್ರಕರಣ ದೃಢ, ಓಮೈಕ್ರಾನ್ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ
ಮುಂಗಡ ಕಾಯ್ದಿರಿಸುವಿಕೆಗಾಗಿ ‘ಏರ್ ಸುವಿಧಾ ಪೋರ್ಟಲ್’ನಲ್ಲಿ ಮಾರ್ಪಾಡು ಮಾಡಲಾಗುವುದು. ಓಮೈಕ್ರಾನ್ ಪತ್ತೆಯಾಗಿರುವ ದೇಶಗಳಲ್ಲಿ ಸಂಚರಿಸಿರುವವರು ಭಾರತಕ್ಕೆ ಬರುವ ಮುನ್ನ ಈ ಪೋರ್ಟಲ್ ಮೂಲಕ ಆರ್ಟಿ–ಪಿಸಿಆರ್ಗೆ ಮುಂಗಡ ಕಾಯ್ದಿರಿಸಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.