ನವದೆಹಲಿ: ಬಲವಂತದ ಮತಾಂತರ ‘ಭಾರಿ ಗಂಭೀರ ಸಂಗತಿ‘ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ ಬಲವಂತದ ಮತಾಂತರ ನಿಲ್ಲದೇ ಹೋದರೆ ಭಾರೀ ಸಂಕಷ್ಟದ ದಿನಗಳು ಎದುರಾಗಲಿದೆ ಎಂದು ಎಚ್ಚರಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್ ಶಾ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ, ಈ ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಆಮಿಷ ಒಡ್ಡುವ ಮೂಲಕ ಬಲವಂತವಾಗಿ ಮತಾಂತರ ಮಾಡುವುದನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

‘ಬಲವಂತದ ಮತಾಂತರ ಭಾರಿ ಗಂಭೀರ ವಿಷಯ. ಇದನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಕಷ್ಟದ ದಿನಗಳು ಎದುರಾಗಲಿದೆ. ಇದನ್ನು ನಿಲ್ಲಿಸಲು ನೀವೇನು ಮಾಡುತ್ತೀರಿ ಎಂಬುದನ್ನು ನಮಗೆ ತಿಳಿಸಿ‘ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

‘ಬಲವಂತದ ಮತಾಂತರ, ದೇಶದ ಭದ್ರತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ತೊಡಕು ಉಂಟು ಮಾಡುವ ಗಂಭೀರ ವಿಷಯ. ಹೀಗಾಗಿ ಈ ವಿಷಯ ಸಂಬಂಧ ಭಾರತ ಸರ್ಕಾರ ತನ್ನ ನಿಲುವು ವ್ಯಕ್ತ ಪಡಿಸಬೇಕು. ಹಾಗೂ ಇದನ್ನು ತೊಡೆದು ಹಾಕಲು ಏನು ಕ್ರಮ ತೆಗೆದುಕೊಳ್ಳಬಹುದು ಎಂದು ನಮಗೆ ತಿಳಿಸಿ‘ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

‘ಬೆದರಿಕೆ, ಆಮಿಷ ಹಾಗೂ ಆರ್ಥಿಕ ಸಹಾಯದ ಭರವಸೆ ನೀಡಿ ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.