ಹಿರಿಯ ಕಮ್ಯುನಿಸ್ಟ್ ನಾಯಕ ಡಿ. ಪಾಂಡಿಯನ್ ನಿಧನ

ಚೆನ್ನೈ: ಹಿರಿಯ ಕಮ್ಯುನಿಸ್ಟ್ ನಾಯಕ ಡಿ. ಪಾಂಡಿಯನ್ (88) ಶುಕ್ರವಾರ ಸಾವಿಗೀಡಾಗಿದ್ದಾರೆ. ಅವರಿಗೆ ಇಬ್ಬರು ಪುತ್ರಿಯರು ಮತ್ತು ಪುತ್ರ ಇದ್ದಾರೆ.
ತಮ್ಮ ಆಪ್ತ ವಲಯದಲ್ಲಿ ‘ಥಾ ಪಾ’ ಎಂದೇ ಖ್ಯಾತರಾಗಿದ್ದ ಪಾಂಡಿಯನ್ ತಮ್ಮ ಜೀವನದುದ್ದಕ್ಕೂ ಬಡವರ ಮತ್ತು ಕಮ್ಯುನಿಸ್ಟ್ ತತ್ವಗಳಿಗಾಗಿಯೇ ಹೋರಾಟ ನಡೆಸಿದರು.
ತಮಿಳು ಭಾಷೆಯಲ್ಲಿ ಪ್ರೌಢಿಮೆ ಹೊಂದಿದ್ದ ಡಿ. ಪಾಂಡಿಯನ್ ಅವರು 1991ರ ಮೇ 21ರಂದು ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಅವರ ಕಾರ್ಯಕ್ರಮದಲ್ಲಿ ರಾಜೀವ್ ಅವರ ಭಾಷಣವನ್ನು ಇಂಗ್ಲಿಷಿನಿಂದ ತಮಿಳಿಗೆ ಭಾಷಾಂತರಿಸಲು ತೆರಳಿದ್ದರು. ಅಂದು ಸಂಭವಿಸಿದ ಮಾನವ ಬಾಂಬ್ ಸ್ಫೋಟದಲ್ಲಿ ರಾಜೀವ್ ಹತ್ಯೆಗೀಡಾಗಿದ್ದರು. ಪಾಂಡಿಯನ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪಾಂಡಿಯನ್ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಚೆನ್ನೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.
ಬಾಂಬ್ ಸ್ಫೋಟದಲ್ಲಿ ಬದುಕುಳಿದ ನಂತರ ಅವರು ರಾಜೀವ್ ಹತ್ಯೆಗೆ ಕಾರಣರಾದ 7 ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಕೋರಿ, ತಮಿಳುನಾಡು ರಾಜ್ಯಪಾಲ ಬನ್ವರಿ ಲಾಲ್ ಪುರೋಹಿತ್ ಅವರಿಗೆ ಪತ್ರವನ್ನೂ ಬರೆದಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.