ಭಾನುವಾರ, ಏಪ್ರಿಲ್ 2, 2023
24 °C

ಚೆನ್ನೈ: ಸ್ಮಾರ್ಟ್‌ ಸಿಟಿ ಯೋಜನೆಯಡಿ 49 ಸ್ಥಳಗಳಲ್ಲಿ ಉಚಿತ ವೈಫೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಚೆನ್ನೈ ಮಹಾನಗರದ ದಕ್ಷಿಣ ಭಾಗದ ಸ್ಮಾರ್ಟ್‌ ಫೋನ್‌ ಬಳಕೆದಾರರು ಇಲ್ಲಿನ 49 ಕಡೆಗಳಲ್ಲಿ 30 ನಿಮಿಷದವರೆಗೆ ಉಚಿತ ವೈಫೈ ಸೌಲಭ್ಯ ಪಡೆಯಬಹುದಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಗ್ರೇಟರ್‌ ಚೆನ್ನೈ ಕಾರ್ಪೋರೇಷನ್‌ (ಜಿಸಿಸಿ) ಈ ಸಲುವಾಗಿ 49 ಸ್ಥಳಗಳಲ್ಲಿ ಸ್ಮಾರ್ಟ್‌ ಫೋಲ್‌ಗಳನ್ನು ಅಳವಡಿಸಿದೆ.

ಉಚಿತ ವೈ-ಫೈ ಸಂಪರ್ಕ ಒದಗಿಸುವ ಸ್ಮಾರ್ಟ್ ಪೋಲ್‌ಗಳನ್ನು ಅಳವಡಿಸಿರುವ ಸ್ಥಳಗಳ ಪಟ್ಟಿಯನ್ನು ಜಿಸಿಸಿ ಮಂಗಳವಾರ ಬಿಡುಗಡೆ ಮಾಡಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ಈ ಸೌಲಭ್ಯ ಬಳಸಲು ತಮ್ಮ ಫೋನ್‌ನಿಂದ ನೋಂದಾಯಿಸಿಕೊಂಡು, ಓಟಿಪಿ ಪಡೆಯಬೇಕು ಎಂದು ಜಿಸಿಸಿ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು