ಶುಕ್ರವಾರ, ಫೆಬ್ರವರಿ 3, 2023
18 °C

ಬೆಂಗಳೂರಿನಿಂದ ಪಟ್ನಾಕ್ಕೆ ಹೊರಟಿದ್ದ ಗೋ ಏರ್ ವಿಮಾನಕ್ಕೆ ಹಕ್ಕಿಗಳ ಗುಂಪು ಡಿಕ್ಕಿ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಪಟ್ನಾ: ಮಂಗಳವಾರ ಪಟ್ನಾದ ಜಯಪ್ರಕಾಶ್ ನಾರಾಯಣ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಬೆಂಗಳೂರಿನಿಂದ ಹೊರಟ್ಟಿದ್ದ ‘ಗೋ ಏರ್’ ವಿಮಾನಕ್ಕೆ ಪಕ್ಷಿಗಳ ಗುಂಪು ಡಿಕ್ಕಿ ಹೊಡೆದಿದೆ.

ಗೋ ಏರ್ ವಿಮಾನ ಜಿ8 274ರ ಪೈಲಟ್‌ಗಳು ವಿಮಾನವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ವಿಮಾನದಲ್ಲಿ 130 ಪ್ರಯಾಣಿಕರಿದ್ದರು. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪಟ್ನಾ ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಸಮೀಪದಲ್ಲಿ ಕೆಲವು ಮಾಂಸದ ಅಂಗಡಿಗಳಿದ್ದು, ಈ ಪ್ರದೇಶದಲ್ಲಿ ಪಕ್ಷಿಗಳ ಗುಂಪು ಆಗಾಗ ಹಾರಾಟ ನಡೆಸುತ್ತೀರುವುದೇ ಡಿಕ್ಕಿಗೆ ಕಾರಣವಾಗಿದೆ ಎಂದರು.

ಕಳೆದ ವರ್ಷ ಜೂನ್ 25 ರಂದು ಗುವಾಹಟಿಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ಎಸ್‌ಜಿ 3724 ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ವಿಮಾನ ಟೇಕ್ ಆಫ್ ಆದ ಕೂಡಲೇ ಐದು ನಿಮಿಷಗಳ ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು