ಚಂದನ್‌ನಗರ (ಪಶ್ಚಿಮ ಬಂಗಾಳ): ಚಂದನ್‌ನಗರದಲ್ಲಿ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಬುಧವಾರ ಆಯೋಜಿಸಿದ್ದ ರ‍್ಯಾಲಿಯಲ್ಲಿ ಕೆಲವರು ‘ದೇಶ್ ಕೆ ಗದ್ದಾರೋಂಕೊ ಗೋಲಿ ಮಾರೋ..’ (ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ) ಎಂಬ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು.

ಸುವೇಂದು ಅಧಿಕಾರಿ, ಹೂಗ್ಲಿ ಸಂಸದೆ ಲಾಕೆಟ್ ಚಟರ್ಜಿ ಅವರಿದ್ದ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದ ವಾಹನದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಈ ಘೋಷಣೆಗಳನ್ನು ಕೂಗಿದರು.

‘ದೇಶದ್ರೋಹಿಗಳನ್ನು ಉದ್ಧೇಶಿಸಿ ಈ ಘೋಷಣೆಗಳನ್ನು ಕೂಗಿದ್ದೇವೆ. ತೃಣಮೂಲ ಕಾಂಗ್ರೆಸ್‌ನಲ್ಲಿಯೂ ಕೆಲವು ಜನ ದೇಶದ್ರೋಹಿಗಳಿದ್ದಾರೆ’ ಎಂದು ಕಾರ್ಯಕರ್ತರು ಹೇಳಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ವಕ್ತಾರ ಶಮಿಕ್ ಭಟ್ಟಾಚಾರ್ಯ, ‘ಪಕ್ಷ ಇಂಥ ಘೋಷಣೆಗಳನ್ನು ಸಮರ್ಥಿಸುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.