ನವದೆಹಲಿ: ಕ್ರೈಸ್ತರ ಪವಿತ್ರ ದಿನ ಗುಡ್ ಫ್ರೈಡೇ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಯೇಸು ಕ್ರಿಸ್ತನ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿದರು.
ಯೇಸುವನ್ನು ಕಲ್ವಾರಿ ಬೆಟ್ಟದಲ್ಲಿ ಶಿಲುಬೆಗೇರಿಸಿದ ದಿನವನ್ನು ಗುಡ್ ಫ್ರೈಡೇ ಅಥವಾ ಶುಭ ಶುಕ್ರವಾರ ಎಂದು ವಿಶ್ವದಾದ್ಯಂತ ನೆಲೆಸಿರುವ ಕ್ರಿಶ್ಚಿಯನ್ನರು ಆಚರಿಸುತ್ತಾರೆ.
'ಗುಡ್ ಫ್ರೈಡೇಯ ಈ ದಿನದಂದು ಯೇಸು ಕ್ರಿಸ್ತನ ಧೈರ್ಯ ಮತ್ತು ತ್ಯಾಗವನ್ನು ನಾವು ಸ್ಮರಿಸುತ್ತಿದ್ದೇವೆ. ಯೇಸುವಿನ ಸೇವೆ ಮತ್ತು ಭ್ರಾತೃತ್ವದ ವಿಚಾರಗಳು ಜನರ ಬದುಕಿಗೆ ದಾರಿದೀಪವಾಗಿದೆ' ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಶುಭ ಶುಕ್ರವಾರ 2022 | ಶಿಲುಬೆ: ಸೋಲಿನ ಪಾಡೋ ಜಯದ ಹಾಡೋ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.