ನವದೆಹಲಿ: ವಿಶ್ವದಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಹರುಡುತ್ತಲೇ ಇದ್ದು, ಸೋಂಕು ಹರಡುವಿಕೆಯನ್ನು ತಡೆಯಲು ರೋಗದ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್ಸ್ಗಳಿಗೆ ಗೂಗಲ್ ಡೂಡಲ್ ಸೋಮವಾರ ಧನ್ಯವಾದ ಹೇಳಿದೆ.

ಲಾಕ್ಡೌನ್ ಮತ್ತು ಅಂತರ ಕಾಯ್ದುಕೊಳ್ಳಬೇಕಾದ ಕಠಿಣ ಸಮಯಗಳಲ್ಲಿ ಬದುಕುಳಿಯಲು ಅನುವು ಮಾಡಿಕೊಡುವ ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕರನ್ನು ಚಿತ್ರಿಸಲು G'oo'gle ನಲ್ಲಿರುವ ಎರಡು 'o' ಗಳನ್ನು ಡೂಡ್ಲೈಸ್ ಮಾಡಲಾಗಿದೆ.

ಡೂಡಲ್ನಲ್ಲಿ ಅಗ್ನಿಶಾಮಕ ವ್ಯಕ್ತಿ, ಪೊಲೀಸ್ ಅಧಿಕಾರಿ, ವೈದ್ಯರು ಮತ್ತು ನರ್ಸ್ಗಳು, ಸರ್ಕಾರಿ ಅಧಿಕಾರಿಗಳು, ವಕೀಲರು, ರೈತರು, ಸ್ವೀಪರ್ಗಳು, ಬಾಣಸಿಗರು ಮತ್ತು ಸಾರ್ವಜನಿಕ ಸಾರಿಗೆ ಸಿಬ್ಬಂದಿಗಳ ಚಿತ್ರವಿದ್ದು,ಡೂಡಲ್ನ ಮಧ್ಯಭಾಗದಲ್ಲಿ ದೊಡ್ಡದಾದ ಹೃದಯದ ಚಿತ್ರದೊಂದಿಗೆ ಧನ್ಯವಾದಗಳನ್ನು ಸಲ್ಲಿಸಲಾಗಿದೆ.

ಧನ್ಯವಾದಗಳು ಕೊರೊನಾವೈರಸ್ ಸಹಾಯಕರು

ಗೂಗಲ್ ಡೂಡಲ್, 'ಕೋವಿಡ್-19 ಪ್ರಪಂಚದಾದ್ಯಂತ ಸಮುದಾಯಗಳ ಮೇಲೆ ನಿರಂತರವಾಗಿ ಪ್ರಭಾವ ಬೀರುತ್ತಿರುವುದರಿಂದಾಗಿ ಜನರು ಹಿಂದೆಂದಿಗಿಂತಲೂ ಈಗ ಪರಸ್ಪರ ಸಹಾಯ ಮಾಡಲು ಒಗ್ಗೂಡುತ್ತಿದ್ದಾರೆ. ಅಂತವರನ್ನು ಗುರುತಿಸಲು ನಾವು ಡೂಡಲ್ ಸರಣಿಯನ್ನು ಪ್ರಾರಂಭಿಸುತ್ತಿದ್ದೇವೆ ಮತ್ತು ಮುಂಚೂಣಿಯಲ್ಲಿರುವ ಅನೇಕರನ್ನು ಗೌರವಿಸುತ್ತೇವೆ. ಇಂದು, ನಾವು ಹೇಳಲು ಬಯಸುತ್ತೇವೆ: ಎಲ್ಲಾ ಕೊರೊನ ವೈರಸ್ ಸಹಾಯಕರಿಗೆ, ಧನ್ಯವಾದಗಳು' ಎಂದು ಹೇಳಿದೆ.

ಉತ್ತರ ಅಮೆರಿಕ, ಕೆನಡಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಕೀನ್ಯಾ, ಘಾನಾ, ಸೆನೆಗಲ್, ಮೊರಾಕೊ, ಅಲ್ಜೀರಿಯಾ, ಸೌದಿ ಅರೇಬಿಯಾ, ಇರಾಕ್, ಓಮನ್, ಭಾರತ, ಪಾಕಿಸ್ತಾನ, ಇಂಡೋನೇಷ್ಯಾ, ಥಾಯ್ಲೆಂಡ್, ಫಿಲಿಪೈನ್ಸ್, ಜಪಾನ್, ಲಾಟ್ವಿಯಾ, ಐರ್ಲೆಂಡ್, ಎಸ್ಟೋನಿಯಾ, ಫ್ರಾನ್ಸ್, ಕ್ರೊಯೇಷಿಯಾ, ಇಟಲಿ, ಸೆರ್ಬಿಯಾ ಸೇರಿ ಇತರ ದೇಶಗಳಲ್ಲೂ ಗೂಗಲ್ ಡೂಡಲ್ ಧನ್ಯವಾದ ಅರ್ಪಿಸಿದೆ.

ಕಳೆದ ವರ್ಷದ ಅಂತ್ಯದಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಸೋಂಕು ನಂತರ ವಿಶ್ವದಾದ್ಯಂತ 9,21,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಧಿಕೃತ ಮೂಲಗಳ ಆಧಾರದ ಮೇಲೆ ಎಎಫ್ಪಿ ವರದಿ ಮಾಡಿದೆ. ಈವರೆಗೂ 28.8 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ಅಮೆರಿಕದಲ್ಲಿ ಈವರೆಗೂ 1,93,705 ಜನರು ಸಾವಿಗೀಡಾಗಿದ್ದರೆ, ಬ್ರೆಜಿಲ್ನಲ್ಲಿ 1,31,210, ಭಾರತದಲ್ಲಿ 78,586 ಮತ್ತು ಮೆಕ್ಸಿಕೋದಲ್ಲಿ 70,604 ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.