ಶನಿವಾರ, ಮಾರ್ಚ್ 6, 2021
32 °C

ಅಂಗವಿಕಲರ ಅಧ್ಯಯನ ವಿ.ವಿ ಸ್ಥಾಪನೆಗೆ ಕೇಂದ್ರ ಸರ್ಕಾರ ಒಲವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರವು ಅಂಗವಿಕಲರ ಅಧ್ಯಯನ ಹಾಗೂ ಪುನರ್ವಸತಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಒಲವು ತೋರಿದೆ.

ಅಂಗವಿಕಲರ ಸಬಲೀಕರಣ ಇಲಾಖೆಯು (ಡಿಇಪಿಡಬ್ಲ್ಯುಡಿ) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಇದೇ 24ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಉದ್ದೇಶಿತ ವಿಶ್ವವಿದ್ಯಾಲಯದ ಕರಡು ಮಸೂದೆಯ ಕುರಿತು ಹೂಡಿಕೆದಾರರು ಹಾಗೂ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.

‘ಅಸ್ಸಾಂ ರಾಜ್ಯದ ಕಮ್ರುಪ್‌ ಜಿಲ್ಲೆಯಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪಿಸಲು ಚಿಂತಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತದೆ’ ಎಂದು ಡಿಇಪಿಡಬ್ಲ್ಯುಡಿ ತಿಳಿಸಿದೆ.

‘ಉದ್ದೇಶಿತ ವಿಶ್ವವಿದ್ಯಾಲಯವು ಡಿಸಬಿಲಿಟಿ ಸ್ಟಡೀಸ್‌, ರಿಹಾಬಿಲಿಟೇಷನ್‌ ಸೈನ್ಸಸ್‌, ಆಡಿಯೊಲಜಿ ಆ್ಯಂಡ್‌ ಸ್ಪೀಚ್‌ ಲಾಂಗ್ವೇಜ್‌ ಪ್ಯಾಥೋಲಜಿ, ಸ್ಪೆಷಲ್‌ ಎಜುಕೇಷನ್‌, ಸೈಕಾಲಜಿ, ನರ್ಸಿಂಗ್‌, ಆರ್ಥೊಟಿಕ್ಸ್‌ ಆ್ಯಂಡ್‌ ಪ್ರೊಸ್ತೆಟಿಕ್ಸ್‌ ಆ್ಯಂಡ್‌ ಅಸಿಸ್ಟೀವ್‌ ಟೆಕ್ನಾಲಜಿ ಹಾಗೂ ಇನ್‌ಕ್ಲೂಸಿವ್‌ ಆ್ಯಂಡ್‌ ಯೂನಿವರ್ಸಲ್‌ ಡಿಸೈನ್‌ ವಿಭಾಗಗಳನ್ನು ಒಳಗೊಂಡಿರಲಿದೆ’ ಎಂದು ಡಿಇಪಿಡಬ್ಲ್ಯುಡಿ ಮಾಹಿತಿ ನೀಡಿದೆ.

‘ಶ್ರೇಯಾಂಕ ಪದ್ಧತಿ ಒಳಗೊಂಡಿರುವ ಈ ವಿಶ್ವವಿದ್ಯಾಲಯವು ದೇಶದ ಇತರ ಅಂಗವಿಕಲ ಹಾಗೂ ಪುನರ್ವಸತಿ ವಿಜ್ಞಾನ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಅಧಿಕಾರವನ್ನೂ ಹೊಂದಿರಲಿದೆ’ ಎಂದೂ ಡಿಇಪಿಡಬ್ಲ್ಯುಡಿ ಹೇಳಿದೆ.

‘ಇದೊಂದು ಕೆಟ್ಟ ಪರಿಕಲ್ಪನೆ. 131 ಪುಟಗಳ ಕಾಯ್ದೆಯ ಬಗ್ಗೆ ಕೇವಲ ಒಂಬತ್ತು ದಿನಗಳೊಳಗೆ (ಜನವರಿ 3) ಪ್ರತಿಕ್ರಿಯಿಸಬೇಕೆಂದು ಸೂಚಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ. ಇದಕ್ಕೆ ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಅಂಗವಿಕಲರ ಪರ ಹೋರಾಟ ಸಂಸ್ಥೆ ಎನ್‌ಪಿಆರ್‌ಡಿ ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು