ಸೋಮವಾರ, ಸೆಪ್ಟೆಂಬರ್ 27, 2021
20 °C

ಇಸ್ರೋದಿಂದ ಭೂ ಪರಿವೀಕ್ಷಣೆ ಉಪಗ್ರಹ ಇಒಎಸ್‌-03 ಯಶಸ್ವಿ ಉಡಾವಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಶ್ರೀಹರಿಕೋಟ: ಭೂ ಪರಿವೀಕ್ಷಣೆ ಉಪಗ್ರಹ ಇಒಎಸ್‌-03 ಅನ್ನು ಗುರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

51.70 ಮೀಟರ್‌ ಉದ್ದದ ಜಿಎಸ್‌ಎಲ್‌ವಿ-ಎಫ್‌10 ರಾಕೆಟ್‌ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 05.43ಕ್ಕೆ ಸರಿಯಾಗಿ ಉಡಾವಣೆಗೊಂಡಿತು.

ಮೇಘಸ್ಫೋಟ ಸೇರಿದಂತೆ, ಕೃಷಿ, ಅರಣ್ಯ, ಜಲಮೂಲಗಳು, ನೈಸರ್ಗಿಕ ವಿಕೋಪಗಳ ಮೇಲ್ವಿಚಾರಣೆಗೆ ನೆರವಾಗುವಂತೆ ದೇಶದ ನೈಜ ಸಮಯದ ಚಿತ್ರಗಳನ್ನು ಸಂಗ್ರಹಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆ 10 ವರ್ಷಗಳವರೆಗೆ ಮುಂದುವರಿಯಲಿದೆ ಎಂದು ಇಸ್ರೋ ಹೇಳಿದೆ.

ಈ ವರ್ಷದ ಎರಡನೇ ಉಡಾವಣೆ ಇದಾಗಿದ್ದು, ಫೆಬ್ರುವರಿಯಲ್ಲಿ ಬ್ರೆಜಿಲ್‌ನ ಭೂ ಪರಿವೀಕ್ಷಣಾ ಉಪಗ್ರಹ‌ ಅಮೇಜಾನಿಯಾ-1 ಮತ್ತು 18 ಅನ್ನು ಉಡಾವಣೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು