ಶುಕ್ರವಾರ, ಜನವರಿ 27, 2023
17 °C

7 ಬಾರಿ ಜಯಗಳಿಸಿದ್ದ ಬುಡಕಟ್ಟು ಜನಾಂಗದ ನಾಯಕನಿಗೆ ಸೋಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಗಡಿಯಾ: ಬಿಜೆಪಿ ಇಲ್ಲಿನ ಜಗಡಿಯಾ ಕ್ಷೇತ್ರವನ್ನು ಇದೇ ಮೊದಲ ಬಾರಿಗೆ ಗೆದ್ದುಕೊಂಡಿದೆ. ಬುಡಕಟ್ಟು ಜನಾಂಗದ ನಾಯಕ, ಏಳು ಬಾರಿ ಶಾಸಕರಾಗಿದ್ದ ಛೋಟುಭಾಯ್ ವಾಸವಾ ಪರಾಜಿತರಾಗಿದ್ದಾರೆ.

ಬಿಜೆಪಿಯ ರಿತೇಶ್ ವಾಸವಾ ಅವರು 23 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ. 78 ವರ್ಷದ ಛೋಟುಭಾಯಿ ಅವರು ಒಂದು ಕಾಲದ ತನ್ನ ಸಹವರ್ತಿ ರಿತೇಶ್ ವಿರುದ್ಧ ಸೋತಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿದೆ. ಎಎಪಿ ಮತ್ತು ಕಾಂಗ್ರೆಸ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಿಸಿವೆ. 

ಛೋಟುಭಾಯಿ ಈ ಬಾರಿ ತಾವೇ ಸ್ಥಾಪಿಸಿದ್ದ ಭಾರತೀಯ ಟ್ರೈಬಲ್ ಪಾರ್ಟಿ ಅಭ್ಯರ್ಥಿಯಾಗಿದ್ದು, ಪಕ್ಷೇತರನಾಗಿ ಕಣದಲ್ಲಿದ್ದರು. ಈ ಹಿಂದೆ ಜನತಾದಳ ಅಭ್ಯರ್ಥಿಯಾಗಿ 5 ಬಾರಿ, ಜೆಡಿಯು ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದರು. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು