ಅಹಮದಾಬಾದ್: ‘ಗುಜರಾತ್‌ನ ಜುನಾಗಢ ಜಿಲ್ಲೆಯ ಗಿರ್ ಅರಣ್ಯ ಪ್ರದೇಶದ ವಿಸಾವದರ್ ಸಮೀಪದ ಅಣೆಕಟ್ಟೆ ಬಳಿ ಒಂದು ಹೆಣ್ಣು ಸಿಂಹ ಮತ್ತು ನಾಲ್ಕು ಕೃಷ್ಣಮೃಗಗಳ ಕಳೇಬರ ಪತ್ತೆಯಾಗಿವೆ’ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
‘ವಿಸಾವದರ್ ಅರಣ್ಯ ಪ್ರದೇಶದಲ್ಲಿರುವ ವೆಕಾರಿಯಾ ಗ್ರಾಮದ ಬಳಿ ಅಣೆಕಟ್ಟೆ ಇದೆ. ಈ ಅಣೆಕಟ್ಟೆ ಬಳಿ ಈ ಕಾಡುಪ್ರಾಣಿಗಳ ಕಳೇಬರ ಪತ್ತೆಯಾಗಿವೆ. ಪ್ರಾಣಿಗಳ ಸಾವಿಗೆ ನಿಖರ ಕಾರಣವನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಜುನಾಗಢ ಅರಣ್ಯದ ಮುಖ್ಯ ಸಂರಕ್ಷಣಾಧಿಕಾರಿ ದುಶ್ಯಂತ್ ವಸವಾಡ ಮಾಹಿತಿ ನೀಡಿದರು.
‘ಗಿರ್ ಅರಣ್ಯ ಪ್ರದೇಶವು ಚಂಡಮಾರುತ ಪೀಡಿತ ಪ್ರದೇಶಗಳಳಲ್ಲಿ ಒಂದಾಗಿದೆ. 5 ರಿಂದ 9 ವರ್ಷದ ಹೆಣ್ಣು ಸಿಂಹ ನೀರಿನಲ್ಲಿ ಮುಳುಗಿ ಸಾವಿಗೀಡಾರಬಹುದು. ಆದರೆ ಇದಕ್ಕೂ ತೌತೆ ಚಂಡಮಾರುತಕ್ಕೂ ಯಾವುದೇ ಸಂಬಂಧವಿದ್ದಂತೆ ಕಾಣುತ್ತಿಲ್ಲ. ಕೃಷ್ಣ ಮೃಗಗಳನ್ನು ಬೆನ್ನಟ್ಟಿದ್ದ ಸಂದರ್ಭದಲ್ಲಿ ಹೆಣ್ಣುಸಿಂಹ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು’ ಎಂದು ಅಧಿಕಾರಿಗಳು ತಿಳಿಸಿದರು.
ಮೇ 16ರಂದು ಭಾವನಗರ ಜಿಲ್ಲೆಯ ವಡಾಲ್ ಪ್ರಾಣಿ ಆರೈಕೆ ಕೇಂದ್ರಕ್ಕೆ ಕರೆತರಲಾಗಿದ್ದ ಚಿರತೆಯೊಂದು ಮೃತಪಟ್ಟಿರುವುದು ಶನಿವಾರ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.