ಪಣಜಿ: ₹ 25 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತು ಹೊಂದಿದ್ದ ಗುಜರಾತ್ ಮೂಲದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಗೋವಾ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜಯರಾಜ್‌ಸಿಂಗ್ ಕೀರ್ತಿಸಿಂಗ್ ಚಾವ್ಡ (33) ಎಂಬಾತ ಬಂಧಿತ ಆರೋಪಿ. ಈತ ಉತ್ತರ ಗೋವಾ ಜಿಲ್ಲೆಯ ಉತ್ತರ ಸಿಯೋಲಿಮ್ ಗ್ರಾಮದಲ್ಲಿ ವಿಲ್ಲಾ ಬಾಡಿಗೆ ಪಡೆದು ವಾಸವಾಗಿದ್ದ.
ಖಚಿತ ಮಾಹಿತಿ ಆಧರಿಸಿ ಮಂಗಳವಾರ ವಿಲ್ಲಾ ಮೇಲೆ ದಾಳಿ ನಡೆಸಿದ ಅಂಜುನಾ ಪೊಲೀಸರು, 4.7 ಲೀಟರ್‌ನಷ್ಟು ಕೆಟಮೈನ್ ಹೊಂದಿದ್ದ 475 ವೈಯಲ್ಸ್‌ಗಳನ್ನು ಹಾಗೂ 270 ಗ್ರಾಮ್‌ನಷ್ಟು ಚರಸ್ ಅನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ವಶಕ್ಕೆ ಪಡೆದಿರುವ ಮಾದಕ ವಸ್ತುಗಳ ಮೌಲ್ಯ ಅಂದಾಜು ₹ 25 ಲಕ್ಷ ಆಗಲಿದೆ. ಬಂಧಿತ ಅಹಮದಾಬಾದ್‌ಗೆ ಸೇರಿದವನಾಗಿದ್ದು, ಆತನ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.