ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಯಂ ವಿವಾಹ’ ಘೋಷಿಸಿದ ಯುವತಿ: ಗೋವಾದಲ್ಲಿ ಮಧುಚಂದ್ರ!

Last Updated 3 ಜೂನ್ 2022, 2:56 IST
ಅಕ್ಷರ ಗಾತ್ರ

ಅಹಮದಾಬಾದ್‌:ಗುಜರಾತ್‌ನ ವಡೋದರಾ ನಗರದಲ್ಲಿ 24 ವರ್ಷದ ಕನ್ಯೆ ಜೂನ್ 11ರಂದು ಗುಜರಾತಿ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ತನ್ನನ್ನು ತಾನೇ (ಸ್ವಯಂಮದುವೆ) ವಿವಾಹವಾಗುತ್ತಿರುವುದಾಗಿಘೋಷಿಸಿ, ಸಂಚಲನ ಮೂಡಿಸಿದ್ದಾರೆ.

‘ಸ್ವಯಂ ವಿವಾಹ’ ನೆರವೇರಿದರೆದೇಶದ ಮೊದಲ ಪ್ರಕರಣ ಎನಿಸಲಿದೆ.ಭಾರತದಲ್ಲಿ ‘ಏಕ ಪತ್ನಿತ್ವ’ ಅಥವಾ ಸ್ವಯಂ-ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎನ್ನುವುದು ಕಾನೂನು ತಜ್ಞರ ಅಭಿಮತ.

ವಡೋದರಾದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕ್ಷಮಾ ಬಿಂದು ಅವರು ದ್ವಿಲಿಂಗಿಯಾಗಿ ಗುರುತಿಸಿಕೊಂಡಿದ್ದು, ಈಸ್ವಯಂ ಮದುವೆಗೆ, ಅವರ ಕುಟುಂಬವೂ ಎಲ್ಲ ಸಿದ್ಧತೆ ನಡೆಸುತ್ತಿದೆ. ವಡೋದರಾದ ಕಲ್ಯಾಣ ಮಂಟಪದಲ್ಲಿ ಮದುವೆ, ಗೋವಾದಲ್ಲಿ ಮಧುಚಂದ್ರ ನಡೆಯಲಿದೆ.

‘ನನಗೆ ವರನ ಜತೆಗೆ ವಿವಾಹ ಇಷ್ಟವಿಲ್ಲ. ಜೀವನ ಪೂರ್ತಿ ಏಕಾಂಗಿಯಾಗಿರುವೆ. ದೇಶದಲ್ಲಿ ಇಲ್ಲಿಯವರೆಗೂ ಯಾರೂ ಕೂಡಸ್ವಯಂಮದುವೆಯಾಗಿಲ್ಲ, ನಾನೇ ಮೊದಲ ನಿದರ್ಶನ’ ಎಂದು ಕ್ಷಮಾ ಹೇಳಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT