ಶನಿವಾರ, ಫೆಬ್ರವರಿ 4, 2023
18 °C

ಮಲೇಷ್ಯಾದಲ್ಲಿ ಕಚೇರಿ ತೆರೆಯಲಿದೆ ಎಚ್‌ಎಎಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಕಚೇರಿ ತೆರೆಯುವುದಾಗಿ ಹೇಳಿದೆ.

ದೇಶಿ ನಿರ್ಮಿತ ಲಘು ಯುದ್ಧ ವಿಮಾನ ‘ತೇಜಸ್‘ ಅನ್ನು ಮಲೇಷ್ಯಾಗೆ ರಫ್ತು ಮಾಡುವ ಸಂಬಂಧ ಎಚ್‌ಎಎಲ್, ಮುಂದಿನ ದಿನಗಳಲ್ಲಿ ಹೆಚ್ಚಿನ ಯುದ್ಧವಿಮಾನ ಪೂರೈಕೆ, ಉದ್ಯಮ ವಿಸ್ತರಣೆ ಮತ್ತು ಸಹಕಾರಕ್ಕೆ ಪೂರಕವಾಗಿ ಕಚೇರಿ ತೆರೆಯುತ್ತಿರುವುದಾಗಿ ಹೇಳಿದೆ.

ತೇಜಸ್ ಯುದ್ಧ ವಿಮಾನ ಖರೀದಿಗೆ ಮಲೇಷ್ಯಾ ಆಸಕ್ತಿ ತೋರಿದೆ ಎನ್ನಲಾಗಿದೆ. ಹೀಗಾಗಿ, ಅಲ್ಲಿ ಕಚೇರಿ ತೆರೆದರೆ, ಮುಂದಿನ ದಿನಗಳಲ್ಲಿ ವ್ಯಾಪಾರ–ಒಪ್ಪಂದ ಮತ್ತು ರಫ್ತು ಕೆಲಸಗಳಿಗೆ ಅನುಕೂಲವಾಗಲಿದೆ.

ರಾಯಲ್ ಮಲೇಷ್ಯಾ ಏರ್ ಪೋರ್ಸ್‌ನ ಜಾಗತಿಕ ಟೆಂಡರ್‌ಗೆ ಅನುಗುಣವಾಗಿ ಬೇಡಿಕೆ ಇರುವ ಯುದ್ಧವಿಮಾನ ಪೂರೈಕೆಗೆ ಎಚ್‌ಎಎಲ್ ಪ್ರಸ್ತಾವನೆ ಸಲ್ಲಿಸಿದೆ. 18 ತೇಜಸ್ ಯುದ್ಧವಿಮಾನ ಪೂರೈಸುವ ಗುರಿಯನ್ನು ಎಚ್‌ಎಎಲ್ ಹೊಂದಿದ್ದು, ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು