ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: 'ಹನುಮಾನ್‌ ಚಾಲೀಸಾ ಪಠಣ ಮುಂದುವರಿಕೆ'

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ವಿರುದ್ಧ ಎಂಎನ್‌ಎಸ್‌ ಪ್ರತಿಭಟನೆ * ಶೇ 90ರಷ್ಟು ಮಸೀದಿಗಳಲ್ಲಿ ಬಳಕೆಯಾಗದ ಧ್ವನಿವರ್ಧಕ * 250 ಜನರ ಬಂಧನ
Last Updated 4 ಮೇ 2022, 19:31 IST
ಅಕ್ಷರ ಗಾತ್ರ

ಮುಂಬೈ: ‘ಮಸೀದಿ ಗಳಲ್ಲಿ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸುವವರೆಗೆ ತಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಹನುಮಾನ್‌ ಚಾಲೀಸಾ ಪಠಿಸುವುದನ್ನು ಮುಂದುವರಿಸುತ್ತಾರೆ’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಬುಧವಾರ ತಿಳಿಸಿದರು.

‘ತಮ್ಮ ಪಕ್ಷದ ಕಾರ್ಯಕರ್ತರನ್ನು ಬಂಧಿಸಿರುವ ಮಹಾರಾಷ್ಟ್ರ ಪೊಲೀಸರು, ಕಾನೂನು ಪಾಲಿಸದವರನ್ನು ಹಾಗೆಯೇ ಬಿಟ್ಟಿದ್ದಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಲು ನಾನು ಕರೆ ನೀಡಿದ ಬಳಿಕ, ಶೇ 90– 92ರಷ್ಟು ಮಸೀದಿಗಳು ಬೆಳಗಿನ ಆಜಾನ್‌ ಸಂದರ್ಭದಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತಿಲ್ಲ’ ಎಂದು ಠಾಕ್ರೆ ತಿಳಿಸಿದರು.

‘ಮುಂಬೈನಲ್ಲಿ ಇರುವ 1,104 ಮಸೀದಿಗಳ ಪೈಕಿ ಬುಧವಾರ 135 ಮಸೀದಿಗಳು ಬೆಳಗಿನ ನಮಾಜ್‌ ವೇಳೆ ಧ್ವನಿವರ್ಧಕಗಳನ್ನು ಬಳಸಿವೆ. ಕಾನೂನು ಉಲ್ಲಂಘಿಸಿದ ಈ ಮಸೀದಿಗಳ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತೀರಿ’ ಎಂದು ಅವರು ಸರ್ಕಾರ ಮತ್ತು ಪೊಲೀಸರನ್ನು ಪ್ರಶ್ನಿಸಿದರು.

ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಬುಧವಾರ ಬೆಳಿಗ್ಗೆ ಮುಂಬೈನ ಚಾರ್ಕೋಪ್ ಪ್ರದೇಶದ ಮಸೀದಿಯ ಬಳಿ ಹನುಮಾನ್ ಚಾಲೀಸಾವನ್ನು ಧ್ವನಿವರ್ಧಕದ ಮೂಲಕ ಪಠಿಸಿದರು.ಮಹಾರಾಷ್ಟ್ರದಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ.ಮುಂಬೈ, ಪುಣೆ ಸೇರಿದಂತೆ ರಾಜ್ಯದಾದ್ಯಂತ ಪೊಲೀಸರು ಹಲವು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದಲ್ಲಿಯಾವುದೇ ರೀತಿ ಧ್ವನಿವರ್ಧಕಗಳ ಮಾರ್ಗಸೂಚಿ ಉಲ್ಲಂಘನೆಯಾಗಿಲ್ಲ. ‘ತಮ್ಮ ಪಕ್ಷಕ್ಕೆ ಯಾರೂ ಹಿಂದುತ್ವದ ಪಾಠವನ್ನು ಕಲಿಸಬೇಕಿಲ್ಲ’ ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT