ಶುಕ್ರವಾರ, ಮಾರ್ಚ್ 31, 2023
22 °C

ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಇಸ್ರೊ ಪಾಲು ಶೇ 8 ರಷ್ಟಾಗಬಹುದು: ಗೋಯೆಂಕಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ದೇಶದ ಖಾಸಗಿ ವಲಯದ ಶ್ರಮದ ಫಲವಾಗಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಇಸ್ರೊ ಶೇ 8ರಷ್ಟು ಪಾಲು ಹೊಂದಬಹುದಾಗಿದೆ’ ಎಂದು ಇಸ್ರೊದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಸದ್ಯ, ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಬಾಹ್ಯಾಕಾಶ ವಲಯದ ಪಾಲು ಶೇ 2ರಷ್ಟಿದೆ. ಖಾಸಗಿ ವಲಯದ ಉದ್ಯಮಗಳಿಗೆ ಇಸ್ರೊ ನೆರವು ಹಾಗೂ ಮಾರ್ಗದರ್ಶನ ನೀಡುತ್ತಿರುವ ಕಾರಣ, ನಮ್ಮ ಪಾಲನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಿದೆ’ ಎಂದು ಭಾರತೀಯ ಬಾಹ್ಯಾಕಾಶ ಉತ್ತೇಜನಾ ಹಾಗೂ ದೃಢೀಕರಣ ಕೇಂದ್ರದ (ಐಎನ್‌ಎಸ್‌ಪಿಎಸಿಇ) ಚೇರಮನ್ ಪವನಕುಮಾರ್ ಗೋಯೆಂಕಾ ಅವರು ಹೇಳಿದ್ದಾರೆ.

‘ಖಾಸಗಿ ವಲಯದ ಉದ್ದಿಮೆಗಳಿಗೆ ಉತ್ತೇಜನ ನೀಡುವುದು ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಪಾತ್ರ ವಹಿಸುವಂತೆ ಈ ಉದ್ದಿಮೆಗಳಿಗೆ ನೆರವು ನೀಡುವುದೇ ನೂತನ ಬಾಹ್ಯಾಕಾಶ ನೀತಿಯ ಉದ್ದೇಶ’ ಎಂದು ಅವರು ಹೇಳಿದ್ದಾರೆ.

‘ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅಗತ್ಯವಿರುವ ತಂತ್ರಜ್ಞಾನ, ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ವ್ಯಾವಹಾರಿಕವಾಗಿಯೂ ಈ ವಲಯ ವೃದ್ಧಿಸುವಂತೆ ಮಾಡುವಲ್ಲಿ ಸಹ ಇಸ್ರೊ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಹೇಳಿದ್ದಾರೆ. 

‘ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ 100 ನವೋದ್ಯಮಗಳು ದೇಶದಲ್ಲಿವೆ. ಇವುಗಳ ಪೈಕಿ ಶೇ 75ರಷ್ಟು ನವೋದ್ಯಮಗಳು ಕಳೆದ ಎರಡು ವರ್ಷಗಳಲ್ಲಿ ಸ್ಥಾಪನೆಯಾಗಿವೆ ಎಂಬುದು ಗಮನಾರ್ಹ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು