ಸೋಮವಾರ, ಜುಲೈ 4, 2022
21 °C

ಮೇವು ಹಗರಣ: ಲಾಲು ಪ್ರಸಾದ್‌ಗೆಜಾಮೀನು ಮಂಜೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಂಚಿ (ಪಿಟಿಐ): ಮೇವು ಹಗರಣಕ್ಕೆ ಸಂಬಂಧಿಸಿ ಡೊರಾಂಡ ಖಜಾನೆ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರಿಗೆ ಜಾರ್ಖಂಡ್‌ ಹೈಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ. ಸಿಬಿಐ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ ಲಾಲು ಪ್ರಸಾದ್ ಅವರಿಗೆ ಐದು ವರ್ಷ ಸಜೆ ವಿಧಿಸಿತ್ತು.

73 ವರ್ಷದ ಲಾಲು ಪ್ರಸಾದ್‌ ಫೆಬ್ರುವರಿಯಿಂದ ಜೈಲಿನಲ್ಲಿದ್ದಾರೆ. ಹೈಕೋರ್ಟ್‌ ಆದೇಶದ ಮಾಹಿತಿ ಕೆಳಹಂತದ ಕೋರ್ಟ್‌ಗೆ ಮಂಗಳವಾರ ತಲುಪಬಹುದು. ಬಳಿಕ ನಾವು ಜಾಮೀನು ಬಾಂಡ್‌ ಸಲ್ಲಿಸಿ ಬಿಡುಗಡೆಗೆ ಕ್ರಮವಹಿಸುತ್ತೇವೆ ಎಂದು ವಕೀಲ ಪ್ರಭಾತ್‌ ಕುಮಾರ್ ತಿಳಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು