ಬುಧವಾರ, ಅಕ್ಟೋಬರ್ 21, 2020
21 °C

ಹಾಥರಸ್‌: ಎಸ್‌ಐಟಿ ತನಿಖೆ ಪೂರ್ಣ, ಹಳ್ಳಿ ಪ್ರವೇಶಕ್ಕೆ ಮಾಧ್ಯಮದವರಿಗೆ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹಾಥರಸ್‌: ದಲಿತ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದ್ದ ತನಿಖೆ ಪೂರ್ಣ ಗೊಂಡಿದ್ದು, ಸಂತ್ರಸ್ತೆಯ ಹಳ್ಳಿಯ ಪ್ರವೇಶಕ್ಕೆ ಮಾಧ್ಯಮದವರಿಗೆ ವಿಧಿಸಿದ್ದ ನಿರ್ಬಂಧವನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.

ಎಸ್‌ಐಟಿ ತನಿಖೆ ಪ್ರಕ್ರಿಯೆಯಲ್ಲಿದ್ದ ಕಾರಣ ಮಾಧ್ಯಮದವರು, ರಾಜಕಾರಣಿಗಳು ಸೇರಿದಂತೆ ಹೊರಗಿನವರಿಗೆ ಸಂತ್ರಸ್ತೆಯ ಹಳ್ಳಿಯ ಪ್ರವೇಶಕ್ಕೆ ಮತ್ತು ಕುಟುಂಬದವರನ್ನು ಭೇಟಿಯಾಗಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದು, ಕೇವಲ ಮಾಧ್ಯಮದವರಿಗಷ್ಟೇ ಹಳ್ಳಿಯನ್ನು ಪ್ರವೇಶಿಸಲು ಹಾಗೂ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ‘ ಎಂದು ಜಂಟಿ ಜಿಲ್ಲಾಧಿಕಾರಿ ಪ್ರೇಮ್‌ ಪ್ರಕಾಶ್ ಮೀನಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದೇ ವೇಳೆ ಜಿಲ್ಲಾಡಳಿತ ಸಂತ್ರಸ್ತೆ ಕುಟುಂಬವನ್ನು ಕೂಡಿಹಾಕಿದ್ದು, ಅವರ ಮೊಬೈಲ್‌ಫೋನ್‌ಗಳನ್ನು ವಶಪಡಿಸಿಕೊಂಡಿದೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು