ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ಖರೀದಿ ದರ ಹೆಚ್ಚಳ ‘ದೊಡ್ಡ ಜೋಕ್‌‘: ರಾಕೇಶ್ ಟಿಕಾಯತ್‌

Last Updated 27 ಸೆಪ್ಟೆಂಬರ್ 2021, 9:56 IST
ಅಕ್ಷರ ಗಾತ್ರ

ಮುಜಾಫ್ಫರ್‌ನಗರ: ಪ್ರತಿ ಕ್ವಿಂಟಲ್‌ ಕಬ್ಬಿನ ಖರೀದಿ ದರವನ್ನು ₹25 ಹೆಚ್ಚಿಸಿರುವ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಟೀಕಿಸಿರುವ ಭಾರತೀಯ ಕಿಸಾನ್‌ ಒಕ್ಕೂಟದ(ಬಿಕೆಯು) ನಾಯಕ ರಾಕೇಶ್ ಟಿಕಾಯತ್‌, ‘ಇದೊಂದು ದೊಡ್ಡ ಜೋಕ್‌‘ ಎಂದು ಹೇಳಿದ್ದಾರೆ.

‘ಪ್ರತಿ ಕ್ವಿಂಟಲ್‌ ಕಬ್ಬಿಗೆ ₹25 ಹೆಚ್ಚಳ ಮಾಡಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಹೆಚ್ಚಳ ಮಾಡುವ ಮೂಲಕ ಉತ್ತರ ಪ್ರದೇಶ ಸರ್ಕಾರ ರೈತರ ವಿಷಯದಲ್ಲಿ ತಮಾಷೆ ಮಾಡುತ್ತಿದೆ‘ ಎಂದು ರಾಕೇಶ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಆಸುಪಾಸಿನ ರಾಜ್ಯಗಳಲ್ಲಿ ಕಬ್ಬು ಖರೀದಿ ದರ ಹೆಚ್ಚಾಗಿದ್ದು, ಡೀಸೆಲ್‌ ಬೆಲೆ ಅಗ್ಗವಾಗಿದೆ. ಆದರೆ,ಉತ್ತರ ಪ್ರದೇಶದಲ್ಲಿ ಡೀಸೆಲ್‌ ಬೆಲೆ ದುಬಾರಿಯಾಗಿದೆ. ಉತ್ತರ ಪ್ರದೇಶ ಸರ್ಕಾರ ಕಬ್ಬಿನ ದರ ಹೆಚ್ಚಿಸಿರುವ ಪ್ರಮಾಣ ತುಂಬಾ ಅಸಮರ್ಪಕವಾಗಿದೆ. ಹಾಗಾಗಿ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ‘ ಎಂದು ಹೇಳಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಬ್ಬಿನ ಖರೀದಿ ದರವನ್ನು ಪ್ರತಿ ಕ್ವಿಂಟಾಲ್‌ಗೆ ₹ 350ಕ್ಕೆ ಏರಿಸುವುದಾಗಿ ಘೋಷಿಸಿದ ಬೆನ್ನಲ್ಲೇ ರಾಕೇಶ್ ಟಿಕಾಯತ್ ಈ ರೀತಿ ಟೀಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT