ಮಂಗಳವಾರ, ಜೂನ್ 28, 2022
20 °C

ಕೋವಿಡ್‌: ಹಿಮಾಚಲ ಪ್ರದೇಶದ ಬಿಜೆಪಿ ಶಾಸಕ ನರೀಂದರ್‌ ಬರಾಗಟಾ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಿಮ್ಲಾ: ‘ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ಸಚೇತಕ ಮತ್ತು ಬಿಜೆಪಿ ಶಾಸಕ ನರೀಂದರ್‌ ಬರಾಗಟಾ  ಅವರು (68) ಕೋವಿಡ್‌ನಿಂದಾಗಿ ಇಲ್ಲಿನ ಪಿಜಿಐ ಚಂಡೀಗಡ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು’ ಎಂದು ಅವರ ಮಗ ಚೇತನ್‌ ಬರಾಗಟಾ ಟ್ವೀಟ್‌ ಮಾಡಿದ್ದಾರೆ.

ನರೀಂದರ್‌ ಅವರು ಜುಬ್ಬಲ್‌ ಕೊಟ್ಕಾಯಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ನರೀಂದರ್‌ ಅವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಜಯರಾಮ್‌ ಠಾಕೂರ್‌ ಅವರು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಅವರು ತೋಟಗಾರಿಕೆ, ತಂತ್ರಜ್ಞಾನ ಶಿಕ್ಷಣ ಮತ್ತು ಆರೋಗ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

ನರೀಂದ್ರ್‌ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಅಲ್ಲಿನ ಸಿ.ಎಂ ಜಯರಾಮ್‌ ಠಾಕೂರ್‌, ‘ನರೀಂದರ್‌ ಅವರ ಸಾವು ಹಿಮಾಚಲ ಪ್ರದೇಶಕ್ಕೆ ತುಂಬಲಾಗದ ನಷ್ಟ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು