ಮಂಗಳವಾರ, ಸೆಪ್ಟೆಂಬರ್ 21, 2021
21 °C

ಹಿಮಾಚಲದಲ್ಲಿ ಭಾರಿ ಮಳೆ, ಪ್ರವಾಹ: ನಾಲ್ಕು ಸಾವು, 9 ಮಂದಿ ನಾಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ನಾಲ್ವರು ಮೃತಪಟ್ಟಿದ್ದು, ಒಂಬತ್ತು ಮಂದಿ ಕಾಣೆಯಾಗಿದ್ದಾರೆ.

ಕುಲು ಜಿಲ್ಲೆಯಲ್ಲಿ ಇಬ್ಬರು, ಚಂಬಾದಲ್ಲಿ ಮತ್ತು ಲಾಹುಲ್-ಸ್ಪಿತಿ ಕಣಿವೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಕಾಣೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಕ್ತಾ ಮಾಹಿತಿ ನೀಡಿದ್ದಾರೆ.

ಕುಲು ಭಾಗದಲ್ಲಿ ಬುಧವಾರ ಬೆಳಿಗ್ಗೆ 6.15ರ ಸುಮಾರಿಗೆ ಮಣಿಕರಣ್‌ ಭಾಗದಲ್ಲಿರುವ ಪಾರ್ವತಿ ನದಿಯ ಉಪನದಿ ಬ್ರಹ್ಮಗಂಗಾದಲ್ಲಿ ಪೂನಂ(25) ಎಂಬ ಮಹಿಳೆ ಮತ್ತು ಆಕೆಯ ಪುತ್ರ ನಿಕುಂಜ್(4) ಕೊಚ್ಚಿ ಹೋಗಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ದಿಢೀರನೆ ಏರಿಕೆಯಾಗಿದೆ ಎಂದು ಮೊಕ್ತಾ ತಿಳಿಸಿದ್ದಾರೆ.

ಲಾಹುಲ್‌ ಭಾಗದಲ್ಲಿರುವ ಉದಯ್‌ಪುರದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆ ವೇಳೆಯಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಜೆಸಿಬಿ ಹಾಗೂ ಕಾರ್ಮಿಕರ ಎರಡು ಟೆಂಟ್‌ಗಳು ಕೊಚ್ಚಿ ಹೋಗಿವೆ. ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಜಮ್ಮು ಮತ್ತು ಕಾಶ್ಮೀರದ ಅಲ್ತಾಫ್‌(19) ಎಂದು ಗುರುತಿಸಲಾಗಿದೆ. ಇನ್ನೂ ಒಂಬತ್ತು ಕಾರ್ಮಿಕರು ಕಾಣೆಯಾಗಿದ್ದಾರೆ.

ಇಂಡೊ–ಟಿಬೆಟ್‌ ಬಾರ್ಡರ್ ಪೊಲೀಸ್ ತಂಡ ಬುಧವಾರ ಬೆಳಿಗ್ಗೆಯಿಂದಲೇ  ಕಾಣೆಯಾದವರಿಗಾಗಿ ಶೋಧಕಾರ್ಯ ಆರಂಭಿಸಿದೆ ಎಂದು ಮೋಕ್ತಾ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು