ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯದಲ್ಲಿ ಭಾರಿ ಭೂಕಂಪ ಸಾಧ್ಯತೆ: ಅಧ್ಯಯನ

Last Updated 22 ಅಕ್ಟೋಬರ್ 2020, 14:52 IST
ಅಕ್ಷರ ಗಾತ್ರ

ನವದೆಹಲಿ: ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸರಣಿ ಭೂಕಂಪನದ ಜೊತೆಗೆ ನಮ್ಮ ಜೀವಿತಾವಧಿಯಲ್ಲೇ 8 ಮ್ಯಾಗ್ನಿಟ್ಯೂಡ್‌ ತೀವ್ರತೆಗಿಂತ ಅಧಿಕವಾದ ಭಾರಿ ಭೂಕಂಪನ ಸಂಭವಿಸುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಉಲ್ಲೇಖಿಸಿದೆ.

ಇಂಥ ದುರ್ಘಟನೆ ಸಂಭವಿಸಿದರೆ ಹಿಮಾಲಯ ಪರ್ವತದ ವ್ಯಾಪ್ತಿಯಲ್ಲಿರುವ ರಾಷ್ಟ್ರಗಳಲ್ಲಿ ಸಂಭವಿಸುವ ಸಾವುನೋವು ಅಪಾರವಾಗಿರಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. 20ನೇ ಶತಮಾನದಲ್ಲಿ ಗಲ್ಫ್‌ ಆಫ್‌ ಅಲಾಸ್ಕದಿಂದ ಪೂರ್ವ ರಷ್ಯಾದ ಆ್ಯಮ್‌ಚಟ್ಕಾದವರೆಗಿರುವ ಲ್ಯೂಷನ್‌ ಸಬ್‌ಡಕ್ಷನ್‌ ವಲಯದಲ್ಲಿ ಸಂಭವಿಸಿದ ಭೂಕಂಪದ ರೀತಿಯೇ ಹಿಮಾಲಯ ಶ್ರೇಣಿಯಲ್ಲೂ ಸರಣಿ ಭೂಕಂಪ ಸಂಭವಿಸಲಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

‘ಸೆಸ್ಮೊಲೊಜಿಕಲ್‌ ರಿಸರ್ಚ್‌ ಲೆಟರ್ಸ್‌’ ಹೆಸರಿನ ನಿಯತಕಾಲಿದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ‘ಭಾರತದ ಅರುಣಾಚಲ ಪ್ರದೇಶದ ಪೂರ್ವ ಗಡಿಭಾಗದಿಂದ ಪಾಕಿಸ್ತಾನದವರೆಗೆ ವ್ಯಾಪಿಸಿರುವ ಹಿಮಾಲಯ ಶ್ರೇಣಿಯು ಈ ಹಿಂದೆಯೂ ಭೂಕಂಪದ ಮೂಲವಾಗಿದೆ. ಈ ಶ್ರೇಣಿಯಲ್ಲಿ ಭೂಕಂಪಗಳು ಮುಂದುವರಿಯಲಿದ್ದು, ಅತಿ ಹೆಚ್ಚು ತೀವ್ರತೆಯ ಭೂಕಂಪ ನಮ್ಮ ಜೀವಿತಾವಧಿಯಲ್ಲೇ ಸಂಭವಿಸದರೆ ಆಶ್ಚರ್ಯಪಡಬೇಕಾಗಿಲ್ಲ’ ಎಂದು ಅಮೆರಿಕದ ನೆವಾಡ ವಿಶ್ವವಿದ್ಯಾಲಯದ ಭೂಗರ್ಭಶಾಸ್ತ್ರ ವಿಭಾಗದ ಪ್ರಾಧ್ಯಾಪಕ ವೆಸ್‌ನೌಸ್ಕಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT