ಶುಕ್ರವಾರ, ಮೇ 27, 2022
28 °C

ಒಂದು ದೇಶ, ಒಂದು ಭಾಷೆ: ಇದನ್ನು ಶಾ ಸವಾಲಾಗಿ ಸ್ವೀಕರಿಸಲಿ- ಸಂಜಯ್‌ ರಾವುತ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಎಲ್ಲ ರಾಜ್ಯಗಳಲ್ಲೂ ಒಂದೇ ಭಾಷೆ ಇರಬೇಕು. 'ಒಂದು ರಾಷ್ಟ್ರ, ಒಂದು ಭಾಷೆ' ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸವಾಲಾಗಿ ಸ್ವೀಕರಿಸಬೇಕು ಎಂದು ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್‌ ಹೇಳಿದ್ದಾರೆ.

ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಅವರ ಭಾಷೆಗೆ ಸಂಬಂಧಿಸಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಜಯ್‌ ರಾವುತ್‌, ರಾಷ್ಟ್ರದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಮತ್ತು ಸ್ವೀಕಾರಾರ್ಹತೆಯಿಂದ ನೋಡುತ್ತಾರೆ ಎಂದಿದ್ದಾರೆ.

ಸಂಸತ್ತಿನಲ್ಲಿ ನನಗೆ ಅವಕಾಶ ಸಿಕ್ಕಾಗಲೆಲ್ಲಾ ಹಿಂದಿಯಲ್ಲಿ ಮಾತನಾಡುತ್ತೇನೆ. ಯಾಕೆಂದರೆ ನಾನೇನು ಹೇಳುತ್ತಿದ್ದೇನೆ ಎಂಬುದನ್ನು ರಾಷ್ಟ್ರದ ಜನತೆ ಕೇಳಬೇಕು. ಹಿಂದಿ ರಾಷ್ಟ್ರದ ಭಾಷೆ. ಇದು ಸಂಪೂರ್ಣ ಭಾರತದಲ್ಲಿ ಸ್ವೀಕಾರಾರ್ಹ ಮತ್ತು ಮಾತನಾಡಬಲ್ಲ ಭಾಷೆಯಾಗಿದೆ. ರಾಷ್ಟ್ರ ಮತ್ತು ವಿಶ್ವದ ಮೇಲೆ ಬಾಲಿವುಡ್‌ ಪ್ರಭಾವ ಬೀರಿದೆ. ಹಾಗಾಗಿ ಒಂದು ಭಾಷೆಯನ್ನು ಅವಮಾನಿಸಬಾರದು' ಎಂದು ರಾವುತ್‌ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಒಂದು ದೇಶ, ಒಂದು ಸಂವಿಧಾನ, ಒಂದು ಧ್ವಜ ಮತ್ತು ಒಂದು ಭಾಷೆ ಹೊಂದುವುದನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ರಾವುತ್‌ ಒತ್ತಾಯಿಸಿದ್ದಾರೆ.

ಮುಂಬರುವ ಮುಂಬೈ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಶಿವಸೇನಾ ಕಣ್ಣಿಟ್ಟಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿರುವ ಉತ್ತರ ಭಾರತದ ಮಂದಿ ಚುನಾವಣೆಯಲ್ಲಿ ನಿರ್ಣಾಯಕರೆನಿಸಿಕೊಂಡಿದ್ದಾರೆ.

'ಹಿಂದಿ ಕಲಿಕೆಯಿಂದ ಉದ್ಯೋಗ ಹೇಗೆ ಸಿಗುತ್ತದೆ? ಕೊಯಮತ್ತೂರಿನಲ್ಲಿ ಪಾನಿಪುರಿ ಮಾರುತ್ತಿರುವವರು ಅವರೇ (ಹಿಂದಿ ಮಾತನಾಡುವವರು)' ಎಂದು ಕೆ. ಪೊನ್ಮುಡಿ ತೀಕ್ಷ್ಣವಾಗಿ ಪ್ರಶ್ನಿಸಿದ್ದರು. ಇದೇ ವೇಳೆ, ಮೊದಲಿನಂತೆ ತಮಿಳುನಾಡಿನಲ್ಲಿ ದ್ವಿಭಾಷಾ ನೀತಿಯನ್ನು ಮುಂದುವರಿಸುವುದಾಗಿ ಪೊನ್ಮುಡಿ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು