ನಾಗ್ಪುರ: 'ವಿವಿಧತೆ ಎಂಬುದು ಏಕತೆಯ ಬಹುಮುಖ ಅಭಿವ್ಯಕ್ತಿ' ಎಂದು ಅರ್ಥಮಾಡಿಕೊಳ್ಳುವವನೇ ನಿಜವಾದ ಹಿಂದೂ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದ ಅವರು, ‘ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಒದಗಿರುವುದು ಸಾಮಾನ್ಯ ಸಾಧನೆಯಲ್ಲ‘ ಎಂದು ಅಭಿಪ್ರಾಯಪಟ್ಟರು.

‘ಸಂಪ್ರದಾಯಬದ್ಧವಾಗಿ ಭಾರತದ ನಿವಾಸಿಯಾಗಿರುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಭಾರತಕ್ಕೆ ಉತ್ತರದಾಯಿಯಾಗಿರುವವನೇ ಹಿಂದೂ. ನಾವು ವೈವಿಧ್ಯತೆಯೊಂದಿಗೆ ಬದುಕಬಹುದು, ಎಲ್ಲಾ ವೈವಿಧ್ಯಗಳು ಒಟ್ಟಿಗೆ ನಡೆಯಬಹುದು, ಏಕೆಂದರೆ ವೈವಿಧ್ಯಗಳು ಏಕತೆಯ ಬಹು ಅಭಿವ್ಯಕ್ತಿಗಳಾಗಿವೆ. ಇದನ್ನು ಅರ್ಥ ಮಾಡಿಕೊಳ್ಳುವವನೇ ಹಿಂದೂ’ ಎಂದು ಹೇಳಿದರು.

ಇಂದೂ ಕೂಡ ಕ್ರೂರ ಶಕ್ತಿಗಳು ಮತ್ತು ಅವರ ಏಜೆಂಟರು ಭಾರತ ಒಡೆಯುವುದನ್ನು ನಿರೀಕ್ಷೆ ಮಾಡುತ್ತಿವೆ. ಅಭಿವೃದ್ಧಿಯಾಗದಂತೆ ಮಾಡಲು ಹವಣಿಸುತ್ತಿವೆ ಎಂದು ಅವರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.