ಸೋಮವಾರ, ಮೇ 23, 2022
30 °C

ಜಾಮ್‌ನಗರ: ಹಿಂದೂ ಸೇನಾದಿಂದ ಗೋಡ್ಸೆ ಪುತ್ಥಳಿ ಸ್ಥಾಪನೆ; ಕಾಂಗ್ರೆಸ್‌ನಿಂದ ಧ್ವಂಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Twitter@PollUpdateInd

ಅಹಮದಾಬಾದ್‌: ಗುಜರಾತ್‌ನ ಜಾಮ್‌ನಗರದ ದೇವಸ್ಥಾನವೊಂದರ ಆವರಣದಲ್ಲಿ ಹಿಂದೂ ಸೇನಾ ಸಂಘಟನೆಯ ಕಾರ್ಯಕರ್ತರು ಸ್ಥಾಪಿಸಿದ್ದ ನಾಥೂರಾಮ್‌ ಗೋಡ್ಸೆ ‍ಪುತ್ಥಳಿಯನ್ನು ಕಾಂಗ್ರೆಸ್‌ ಮುಖಂಡರು ಮಂಗಳವಾರ ಧ್ವಂಸ ಮಾಡಿದ್ದಾರೆ.

‘ಇದು ಹಿಂದೂ ಸೇನಾ ಕಾರ್ಯಕರ್ತರು ಎಸಗಿರುವ ದೇಶದ್ರೋಹವಾಗಿದ್ದು, ಈ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು’ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

‘ಬೆಂಬಲಿಗರೊಂದಿಗೆ ಹನುಮಾನ್ ಮಂದಿರಕ್ಕೆ ಮಂಗಳವಾರ ಬೆಳಿಗ್ಗೆ ತೆರಳಿ, ಗೋಡ್ಸೆ ಪುತ್ಥಳಿಯನ್ನು ಧ್ವಂಸ ಮಾಡಲಾಯಿತು’ ಎಂದು ಕಾಂಗ್ರೆಸ್‌ನ ಜಾಮ್‌ನಗರ ಘಟಕದ ಅಧ್ಯಕ್ಷ ದಿಗುಭಾ ಜಡೇಜಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಾತ್ಮ ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆ ಪುತ್ಥಳಿಯನ್ನು ಹಿಂದೂ ಸೇನಾ ಅಧ್ಯಕ್ಷ ಪ್ರತೀಕ್‌ ಭಟ್‌ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಹನುಮಾನ್‌ ಮಂದಿರದಲ್ಲಿ ಸೋಮವಾರ ಸ್ಥಾಪಿಸಿದ್ದರು. ಪುತ್ಥಳಿಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಕಾಂಗ್ರೆಸ್‌ ಮುಖಂಡರ ವಿರುದ್ಧ ದೂರು ದಾಖಲಿಸುವುದಾಗಿ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು