ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ದೇಣಿಗೆ: ಸೋನಿಯಾ ನೇತೃತ್ವದ ಎರಡು ಸಂಸ್ಥೆಗಳ ಲೈಸೆನ್ಸ್‌ ರದ್ದು

Last Updated 23 ಅಕ್ಟೋಬರ್ 2022, 10:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ನೇತೃತ್ವದ ಎರಡು ಸಂಸ್ಥೆಗಳಿಗೆ, ವಿದೇಶಿ ನೆರವು ನಿಯಂತ್ರಣ ಕಾಯ್ದೆಯಡಿ (ಎಫ್‌ಸಿಆರ್‌ಎ) ನೀಡಲಾಗಿದ್ದ ಲೈಸೆನ್ಸ್‌ ಅನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.

ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ರಾಜೀವ್‌ಗಾಂಧಿ ಫೌಂಡೇಷನ್ (ಆರ್‌ಜಿಎಫ್) ಮತ್ತು ರಾಜೀವ್‌ಗಾಂಧಿ ಚಾರಿಟೆಬಲ್ ಟ್ರಸ್ಟ್‌ (ಆರ್‌ಜಿಸಿಟಿ) ನೀಡಲಾಗಿದ್ದ ಲೈಸೆನ್ಸ್‌ ರದ್ದುಪಡಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯ ತೆರಿಗೆ ವಿವರ ದಾಖಲಿಸುವಾಗ ದಾಖಲೆಗಳನ್ನು ತಿರುಚಲಾಗಿದೆ. ಹಣ ದುರ್ಬಳಕೆ ಆಗಿದೆ. ಚೀನಾ ಸೇರಿದಂತೆ ವಿವಿಧ ದೇಶಗಳಿಂದ ಬಂದಿದ್ದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಈ ಕುರಿತು ತನಿಖೆ ನಡೆಸಿದ್ದಅಂತರ ಸಚಿವಾಲಯ ಸಮಿತಿ ವರದಿ ನೀಡಿತ್ತು ಎಂದು ಹೇಳಿಕೆ ತಿಳಿಸಿದೆ.

ಈ ಎರಡೂ ಸಂಸ್ಥೆಗಳ ಟ್ರಸ್ಟಿಗಳಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಸಂಸದ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಮೊಂಟೆಕ್‌ ಸಿಂಗ್ ಅಹ್ಲುವಾಲಿಯಾ, ಸುಮನ್‌ ದುಬೆ, ಅಶೋಕ್‌ ಗಂಗೂಲಿ ಸೇರಿದ್ದಾರೆ.

ಆರ್‌ಜಿಎಫ್‌ ಅನ್ನು 1991ರಲ್ಲಿ ಸ್ಥಾಪಿಸಲಾಗಿದ್ದು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ ಮತ್ತು ಮಕ್ಕಳು, ಅಂಗವಿಕಲರಿಗೆ ನೆರವು ಕಾರ್ಯದಲ್ಲಿ ತೊಡಗಿಕೊಂಡಿತ್ತು. ಆರ್‌ಜಿಸಿಟಿ ಅನ್ನು 2002ರಲ್ಲಿ ಸ್ಥಾಪಿಸಿದ್ದು ಇದು ನಿರ್ಗತಿಕರ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿತ್ತು.

ಬಿಜೆಪಿ ಸ್ವಾಗತ: ಎರಡು ಸಂಸ್ಥೆಗಳ ಲೈಸೆನ್ಸ್ ರದ್ದುಪಡಿಸಿದ ಸರ್ಕಾರದ ಕ್ರಮವನ್ನು ಬಿಜೆಪಿ ಸ್ವಾಗತಿಸಿದೆ. ‘ಗಾಂಧಿ ಕುಟುಂಬ ಮತ್ತು ಅವರಿಗೆ ಸಂಬಂಧಿಸಿದ ಸಂಸ್ಥೆಗಳು ಕಾನೂನಿಗಿಂತ ದೊಡ್ಡವಲ್ಲ’ ಎಂದು ಬಿಜೆಪಿ ವರ್ಕಾರ ಸಂಬೀತ್‌ ಪಾತ್ರಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT