ಗುರುವಾರ , ಮಾರ್ಚ್ 23, 2023
29 °C

ಸೇವಾ ವಲಯದಲ್ಲಿ ಮಾನವ ಸಂಪನ್ಮೂಲವೇ ಅತಿದೊಡ್ಡ ಆಸ್ತಿ: ಜಮ್ಮು ಕಾಶ್ಮೀರ ಗವರ್ನರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಪ್ರತಿಭೆ, ಕೌಶಲ ಮತ್ತು ಸೃಜನಶೀಲತೆಯ ಸಂಯೋಜನೆಯನ್ನೊಳಗೊಂಡ ಮಾನವ ಸಂಪನ್ಮೂಲ ಸೇವಾ ವಲಯದಲ್ಲಿನ ಅತಿ ದೊಡ್ಡ ಸಂಪತ್ತು ಎಂದು ಜಮ್ಮು-ಕಾಶ್ಮೀರ ಲೆಫ್ಟಿನಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಹೇಳಿದ್ದಾರೆ.

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (ಎನ್‌ಎಎಸಿ), ʼಜಮ್ಮು ಕಾಶ್ಮೀರ ಮತ್ತು ಲಡಾಖ್- ಕೇಂದ್ರಾಡಳಿತ ಪ್ರದೇಶಗಳ ಮಾನ್ಯತೆ ವರದಿಗಳ ವಿಶ್ಲೇಷಣೆʼ ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.

ʼಕೃಷಿ ಆರ್ಥಿಕತೆಯ ಬಗ್ಗೆ ಮಾತನಾಡುವುದಾದರೆ ನಾವು ಭೂಮಿಯನ್ನು ಆಸ್ತಿಯಾಗಿ ಹೊಂದಿದ್ದೇವೆ. ಕೈಗಾರಿಕಾ ಆರ್ಥಿಕತೆಯಲ್ಲಿ ಕಾರ್ಮಿಕರ ಬಲವಿದೆ. ಅದೇ ರೀತಿ ಸೇವಾ ವಲಯದಲ್ಲಿ ನವೀನ ತಂತ್ರಜ್ಞಾನ ಮತ್ತು ಪ್ರತಿಭೆ, ಕೌಶಲ, ಸೃಜನಶೀಲತೆಯ ಸಂಯೋಜನೆಯನ್ನೊಳಗೊಂಡ ಮಾನವ ಸಂಪನ್ಮೂಲ ಅತಿ ದೊಡ್ಡ ಸಂಪತ್ತುʼ ಎಂದು ಮನೋಜ್‌ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ, ʼನಾವು ಅಭಿವೃದ್ಧಿಯ ಮಾದರಿ ರೂಪಿಸುವಾಗ ಮಾನವ ಸಂಪನ್ಮೂಲದ ಹೆಚ್ಚಳವನ್ನು ಜಾಗರೂಕವಾಗಿ ಖಾತ್ರಿಪಡಿಸಿಕೊಳ್ಳಬೇಕುʼ ಎಂದೂ ಕಿವಿಮಾತು ಹೇಳಿದ್ದಾರೆ.

ಮುಂದುವರಿದು, ʼನನ್ನ ಪ್ರಕಾರ, ಶಿಕ್ಷಣ ಕ್ಷೇತ್ರವು ದೇಶದ ಉಳಿದ ವಲಯಗಳೊಂದಿಗೆ ಸ್ಪರ್ಧಿಸಬೇಕುʼ

ʼಹೊಸ ಸಾಧ್ಯತೆಗಳು, ಆವಿಷ್ಕಾರ ಮತ್ತು ಕಮ್ಮಟಗಳಿಗೆ ಅನುವು ಮಾಡಿಕೊಡಲು ಟಾಟಾ ಗ್ರೂಪ್ಸ್‌ (ಭಾರತದ ಬಹುರಾಷ್ಟ್ರೀಯ ಕಂಪೆನಿ) ಜೊತೆಗೆ ಬಾರಾಮುಲ್ಲಾ ಮತ್ತು ಜಮ್ಮುವಿನಲ್ಲಿ ಎರಡು ಕೇಂದ್ರಗಳನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅನುಮೋದನೆಯೊಂದಿಗೆ ಹದಿನಾಲ್ಕು ಕೇಂದ್ರಗಳನ್ನು ತೆರೆಯಲಿದ್ದೇವೆʼ ಎಂದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕೌಶಲಾಭಿವೃದ್ಧಿ, ಕೃತಕ ಬುದ್ಧಿಮತ್ತೆ, 3d ಪ್ರಿಂಟಿಂಗ್‌, ದತ್ತಾಂಶ ವಿಶ್ಲೇಷಣೆ, ಬಯೋಟೆಕ್‌ ಮತ್ತು ಇತರ ಕ್ಷೇತ್ರಗಳಿಗಾಗಿ ಸುಮಾರು ₹ 200 ಕೋಟಿ ಹಂಚಿಕೆ ಮಾಡಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು