ಭಾನುವಾರ, ಮೇ 16, 2021
22 °C

ಸಹಾಯ ಕೇಳಿಕೊಂಡು ಬಂದ ಗರ್ಭಿಣಿಗೆ ವಿಶೇಷ ಮೆಟ್ರೊ ರೈಲಿನ ವ್ಯವಸ್ಥೆ!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಗರ್ಭಿಣಿಯೊಬ್ಬರನ್ನು ಅವರು ಹೋಗಬೇಕಾದ ಸ್ಥಳಕ್ಕೆ ತಲುಪಿಸಲು ವಿಶೇಷ ಮೆಟ್ರೊ ರೈಲು ವ್ಯವಸ್ಥೆ ಕಲ್ಪಿಸಿದ ಅಪರೂಪದ ಪ್ರಕರಣ ಹೈದರಾಬಾದ್‌ನಲ್ಲಿ ನಡೆದಿದೆ. 

ಭಾರಿ ಮಳೆಯಿಂದಾಗಿ ನಗರದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೀಗಾಗಿ ವಾಹನ ಸೌಕರ್ಯವಿಲ್ಲದೆ ಸಹಾಯ ಕೇಳಿಕೊಂಡು ವಿಕ್ಟೋರಿಯಾ ಮೆಮೋರಿಯಲ್‌ ಮೆಟ್ರೊ ನಿಲ್ದಾಣಕ್ಕೆ ಬಂದಿದ್ದ ಮಹಿಳೆಗೆ ಅಧಿಕಾರಿಗಳು ನೆರವಾಗಿದ್ದಾರೆ.

‘ಅಕ್ಟೋಬರ್‌ 14ರಂದು ಗರ್ಭಿಣಿಯೊಬ್ಬರು ರಾತ್ರಿ 10ಕ್ಕೆ ನಿಲ್ದಾಣಕ್ಕೆ ಬಂದಿದ್ದರು. ಕೊರೊನಾ ಪರಿಸ್ಥಿತಿಯಿಂದಾಗಿ ರಾತ್ರಿ 9 ಗಂಟೆಗೆ ಮೆಟ್ರೊ ಸೇವೆ ಕೊನೆಗೊಳ್ಳುತ್ತದೆ. ‘ಮಿಯಾಪುರಕ್ಕೆ ಹೋಗಬೇಕು. ಏನಾದರೂ ವ್ಯವಸ್ಥೆ ಮಾಡಿ’ ಎಂದು ಅವರು ಕೇಳಿಕೊಂಡರು. ಅವರ ಪರಿಸ್ಥಿತಿಯನ್ನು ನೋಡಿ ವಿಶೇಷ ರೈಲು ವ್ಯವಸ್ಥೆಯನ್ನು ಕಲ್ಪಿಸಲಾಯಿತು’ ಎಂದು ಮೆಟ್ರೊ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು