ಶುಕ್ರವಾರ, ಅಕ್ಟೋಬರ್ 30, 2020
19 °C
ಭಾರತೀಯ ವಾಯುಪಡೆ ಸಂಸ್ಥಾಪನಾ ದಿನದಂದು ಭದೌರಿಯಾ ಶ್ಲಾಘನೆ

ಕಾರ್ಯಾಚರಣೆ ಸಾಮರ್ಥ್ಯ ಪ್ರದರ್ಶಿಸಿದ ವಾಯುಪಡೆ: ಆರ್‌ಕೆಎಸ್‌ ಭದೌರಿಯಾ ಶ್ಲಾಘನೆ

ಪಿಟಿಐ Updated:

ಅಕ್ಷರ ಗಾತ್ರ : | |

bhadauria

ನವದೆಹಲಿ: ತನ್ನ ಸಂಕಲ್ಪ ಮತ್ತು ಕಾರ್ಯಾಚರಣೆಯ ಸಾಮರ್ಥ್ಯದ ಜತೆಗೆ ಎಂಥದ್ದೇ ಸಂದರ್ಭದಲ್ಲೂ ಎದುರಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುವ ಇಚ್ಛಾಶಕ್ತಿಯನ್ನು ಭಾರತೀಯ ವಾಯುಪಡೆಯು ಪ್ರದರ್ಶಿಸಿದೆ ಎಂದು ಏರ್‌ ಚೀಫ್‌ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಹೇಳಿದರು.

ಗುರುವಾರ ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು, ಪೂರ್ವ ಲಡಾಖ್‌ನಲ್ಲಿ ತನ್ನ ಸೇನೆಯ ಯುದ್ಧದ ಸನ್ನದ್ಧತೆಯನ್ನು ಉಲ್ಲೇಖಿಸಿ ಮಾತನಾಡಿದರು.

ದೇಶದ ಉತ್ತರದ ಗಡಿ ಭಾಗದಲ್ಲಿ ಇತ್ತೀಚೆಗೆ ನಡೆದ ‘ಸಂಘರ್ಷ‘ದ ವೇಳೆ ವಾಯುಪಡೆಯ ಯೋಧರು ‘ತ್ವರಿತಗತಿ‘ಯಲ್ಲಿ ಪ್ರತಿಕ್ರಿಯಿ ಸಿದ್ದನ್ನು ಅವರು ಶ್ಲಾಘಿಸಿದರು. ಅಷ್ಟೇ ಅಲ್ಲ, ಎಂಥದ್ದೇ ಯುದ್ಧ ಸಂಭವನೀಯತೆಯನ್ನು ನಿಭಾಯಿಸುವುದಕ್ಕಾಗಿ ವಾಯುಪಡೆಯ ಯೋಧರನ್ನು ನಿಯೋಜಿಸುವುದರ ಕುರಿತು ಹೇಳಿದರು.

ಪೂರ್ವ ಲಡಾಖ್‌ನಲ್ಲಿ ಭಾರತೀಯ ಮತ್ತು ಚೀನಾದ ಸೇನಾಪಡೆಗಳು ಐದು ತಿಂಗಳು ಕಹಿ ಘಟನೆಗಳನ್ನು ಎದುರಿಸುವಲ್ಲಿ ನಿರತವಾಗಿ ದ್ದವು. ಆ ಪ್ರದೇಶದಲ್ಲಿ ಯಾವುದೇ ಸಂಭವನೀಯ ದಾಳಿಯನ್ನು ಎದುರಿಸಲು  ಭಾರತೀಯ ವಾಯುಪಡೆಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಯೋಧರು ಉತ್ತರ ಗಡಿಭಾಗದಲ್ಲಿ ನೀಡಿದ ತ್ವರಿತ ಪ್ರತಿಕ್ರಿಯೆಯಾಗಿ ಅವರನ್ನು ಶ್ಲಾಘಿಸುತ್ತೇನೆ‘ ಎಂದು ಅವರು ಭದೌರಿಯಾ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು