ಮಂಗಳವಾರ, ಮೇ 17, 2022
27 °C

ಪ್ರದೀಪ್ ಗವಾಂಡೆ ಜೊತೆ ಇಂದು ಹಸೆಮಣೆ ಏರಲಿರುವ ಐಎಎಸ್ ಟಾಪರ್ ಟಿನಾ ಡಾಬಿ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಜೈಪುರ: ಭಾರತೀಯ ಆಡಳಿತ ಸೇವೆಗಳ (ಐಎಎಸ್‌) ಅಧಿಕಾರಿ ಟಿನಾ ಡಾಬಿ ಅವರು ಎರಡನೇ ಮದುವೆಯಾಗುತ್ತಿದ್ದು, ಐಎಎಸ್‌ ಅಧಿಕಾರಿ ಪ್ರದೀಪ್‌ ಗಾವಂಡೆ ಅವರೊಂದಿಗೆ ಇಂದು (ಬುಧವಾರ) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಜೈಪುರದ ಹೋಟೆಲ್‌ವೊಂದರಲ್ಲಿ ಮದುವೆ ಸಮಾರಂಭಕ್ಕೆ ಎರಡೂ ಕುಟುಂಬದ ಆಪ್ತರು ಮತ್ತು ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿದೆ. 

ಮರಾಠಿ- ರಾಜಸ್ಥಾನಿ ಪದ್ಧತಿಯಂತೆ ಟಿನಾ ಮತ್ತು ಪ್ರದೀಪ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

ಇತ್ತೀಚೆಗೆ ಟಿನಾ ಡಾಬಿ ಅವರು ಪ್ರದೀಪ್‌ ಗಾವಂಡೆ ಅವರೊಂದಿಗೆ ನಿಶ್ವಿತಾರ್ಥ ಮಾಡಿಕೊಂಡಿದ್ದರು. ಈ ಸಮಾರಂಭದ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. 

ಓದಿ...  Social Media ಟ್ರೆಂಡ್‌: IAS ಟಾಪರ್‌ ಟಿನಾ ನಿಶ್ಚಿತಾರ್ಥ; 2ನೇ ಮದುವೆಗೆ ತಯಾರಿ

ಟಿನಾ ಅವರು 2020ರ ನವೆಂಬರ್‌ನಲ್ಲಿ ಮೊದಲ ಪತಿ ಅಮೀರ್–ಉಲ್‌–ಶಫಿ ಖಾನ್‌ ಅವರಿಂದ ವಿಚ್ಚೇದನ ಪಡೆದಿದ್ದಾರೆ. ಟಿನಾ ಮತ್ತು ಅಮೀರ್‌ ಪರಸ್ಪರ ಪ್ರೀತಿಸಿ 2018ರಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಎರಡೇ ವರ್ಷಕ್ಕೆ ಈ ದಂಪತಿ ಬೇರೆಯಾಗಿದ್ದರು. 

ಯುಪಿಎಸ್‌ಸಿ ನಡೆಸುವ ಸಿವಿಲ್‌ ಸರ್ವೀಸಸ್‌ ಪರೀಕ್ಷೆಯಲ್ಲಿ ಟಿನಾ ಡಾಬಿ 2015ರ ಬ್ಯಾಚ್‌ನ ಟಾಪರ್‌ ಆದವರು. ಸಿವಿಲ್‌ ಸರ್ವೀಸಸ್‌ನಲ್ಲಿ ಪ್ರಥಮ ಸ್ಥಾನ ಪಡೆದ ದಲಿತ ಸಮುದಾಯದ ಮೊದಲ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಯೂ ಟಿನಾ ಅವರ ಪಾಲಿಗಿದೆ.

ಓದಿ...  ಟಿನಾ–ಅಥರ್‌ ವಿಚ್ಛೇದನ: ಅಧಿಕೃತವಾಗಿ ಬೇರೆಯಾದ ಐಎಎಸ್‌ ಟಾಪರ್‌ ದಂಪತಿ

ಮಹಾರಾಷ್ಟ್ರದವರಾದ ಪ್ರದೀಪ್‌ 2013ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ದಾಬಿ, ರಾಜಸ್ಥಾನದ ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗವಾಂಡೆ ರಾಜಸ್ಥಾನದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯ ನಿರ್ದೇಶಕರಾಗಿದ್ದಾರೆ. 

ಅಂತರ್‌ಧರ್ಮೀಯ ಮದುವೆ, ಐಎಎಸ್‌ ಟಾಪರ್‌ಗಳ ಪ್ರೇಮ ಪ್ರಸಂಗ, ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗಳು,...ಹೀಗೆ ಹಲವು ಕಾರಣಗಳಿಂದಾಗಿ 2016ರಿಂದಲೂ ಟಿನಾ ಡಾಬಿ ಸುದ್ದಿಯಲ್ಲಿದ್ದಾರೆ.

ಇವನ್ನೂ ಓದಿ...

 ಸಿಗದ ಉದ್ಯೋಗ, ಟೀ ಸ್ಟಾಲ್ ತೆರೆದು ಬದುಕು ಕಟ್ಟಿಕೊಂಡ ಅರ್ಥಶಾಸ್ತ್ರ ಪದವೀಧರೆ!

 ತಾಯಿಯಾಗುವ ಖುಷಿಯಲ್ಲಿ ಟೆನಿಸ್ ಲೋಕದ ‘ಬೆಡಗಿನ ತಾರೆ’ ಮರಿಯಾ ಶರಪೋವಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು