ಮಂಗಳವಾರ, ಮೇ 17, 2022
27 °C

2ನೇ ಡೋಸ್ ಪಡೆದ 6 ತಿಂಗಳ ಬಳಿಕ ಬೂಸ್ಟರ್ ಡೋಸ್‌ಗೆ ಸೂಕ್ತ ಸಮಯ: ಕೃಷ್ಣ ಎಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡ 6 ತಿಂಗಳ ಬಳಿಕ ಬೂಸ್ಟರ್ ಡೋಸ್‌ಗೆ ಸೂಕ್ತ ಸಮಯ ಎಂದು ಭಾರತ್ ಬಯೋಟೆಕ್‌ನ ಅಧ್ಯಕ್ಷ ಮತ್ತು ಎಂಡಿ, ಕೃಷ್ಣ ಎಲ್ಲ ಹೇಳಿದ್ಧಾರೆ.

ಜಗತ್ತಿನಲ್ಲೇ ಝೀಕಾ ವೈರಸ್ ಸೋಂಕಿಗೆ ಲಸಿಕೆ ಸಂಶೋಧಿಸಿದ ಏಕೈಕ ಕಂಪನಿ ನಮ್ಮದು ಎಂದು ಅವರು ಹೇಳಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ವಿಜ್ಞಾನದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಟೈಮ್ಸ್ ನೌ ಸಮ್ಮೇಳನದಲ್ಲಿ ಅವರು ಹೇಳಿದ್ಧಾರೆ.

‘ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ 6 ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯಲು ಸೂಕ್ತ ಸಮಯವಾಗಿದೆ’ ಎಂದು ಕೃಷ್ಣ ಹೇಳಿದ್ದಾರೆ.

ವಿಶ್ವದಾದ್ಯಂತ ನೇಸಲ್ ಲಸಿಕೆ ಬಗ್ಗೆ ಗಮನಹರಿಸಲಾಗುತ್ತಿದೆ. ಸೋಂಕು ಹರಡುವಿಕೆ ತಡೆಗೆ ಅದೊಂದೇ ಸೂಕ್ತ ಮಾರ್ಗವಾಗಿದ್ದು, ಭಾರತ್ ಬಯೋಟೆಕ್ ಸಹ ನೇಸಲ್ ಲಸಿಕೆ ತಯಾರಿಕೆಗೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

‘ನಾವು ನೇಸಲ್ ಕೋವಿಡ್ ಲಸಿಕೆಯನ್ನು ಬಿಡುಗಡೆ ಮಾಡಲಿದ್ದು, ಮೊದಲ ಡೋಸ್ ಆಗಿ ಕೋವ್ಯಾಕ್ಸಿನ್ ಲಸಿಕೆ ಮತ್ತು ಎರಡನೇ ಡೋಸ್ ಆಗಿ ನೇಸಲ್ ಲಸಿಕೆ ನೀಡಲು ಚಿಂತಿಸುತ್ತಿದ್ದೇವೆ. ನೇಸಲ್ ಲಸಿಕೆಯು ವೈಜ್ಞಾನಿಕವಾಗಿ ಅತ್ಯಂತ ಮುಖ್ಯವಾದುದ್ದಾಗಿದ್ದು, ಅದರಿಂದ ಸೋಂಕಿನ ಹರಡುವಿಕೆ ತಡೆಯಬಹುದಾಗಿದೆ’ಎಂದು ಅವರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು