ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅತ್ಯುತ್ತಮ ಸಂಸ್ಥೆ ಐಐಟಿ ಮದ್ರಾಸ್‌: ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌

Last Updated 9 ಸೆಪ್ಟೆಂಬರ್ 2021, 9:21 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿನ ಅತ್ಯುತ್ತಮ ಸಂಸ್ಥೆಗಳಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್‌ ಅಗ್ರಸ್ಥಾನ ಪಡೆದಿದೆ.

ಶಿಕ್ಷಣ ಸಚಿವಾಲಯದ ನ್ಯಾಷನಲ್‌ ಇನ್‌ಸ್ಟಿಟ್ಯೂಷನಲ್‌ ರ‍್ಯಾಂಕಿಂಗ್‌ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್‌) ಗುರುವಾರ ಪ್ರಕಟಿಸಲಾಗಿದ್ದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಂಶೋಧನಾ ಸಂಸ್ಥೆಗಳಲ್ಲಿ ಅತ್ಯುತ್ತಮ ಎನ್ನುವ ಹಿರಿಮೆಗೆ ಪಾತ್ರವಾಗಿದೆ.

ಎಂಟು ಐಐಟಿಗಳು ಮತ್ತು ಎರಡು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್‌ಐಟಿ) ದೇಶದ ಮೊದಲ ಹತ್ತು ಅತ್ಯುತ್ತಮ ಎಂಜಿನಿಯರಿಂಗ್‌ ಸಂಸ್ಥೆಗಳಲ್ಲಿ ಸ್ಥಾನ ಪಡೆದಿವೆ.

ಅಹಮದಾಬಾದ್‌ನ ಭಾರತೀಯ ನಿರ್ವಹಣಾ ಸಂಸ್ಥೆಯು (ಐಐಎಂ) ‘ಬಿ–ಸ್ಕೂಲ್‌’ಗಳಲ್ಲೇ ಅತ್ಯುತ್ತಮ ಸ್ಥಾನ ಪಡೆದಿದೆ. ಜಮಿಯಾ ಹಮದರ್ದ್‌ ಸಂಸ್ಥೆಯು ಫಾರ್ಮಸಿ ಅಧ್ಯಯನದಲ್ಲಿ ಅಗ್ರಸ್ಥಾನ ಪಡೆದಿದೆ.

ವೈದ್ಯಕೀಯ ಕಾಲೇಜುಗಳಲ್ಲಿ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನವನ್ನು ಚಂಡೀಗಡದ ಪಿಜಿಐಎಂಇಆರ್‌ ಪಡೆದಿದೆ. ವೆಲ್ಲೋರ್‌ನ ಕ್ರಿಶ್ಚಿಯನ್‌ ವೈದ್ಯಕೀಯ ಕಾಲೇಜು ಮೂರನೇ ಸ್ಥಾನ ಪಡೆದಿದೆ.

ಕಾಲೇಜು ವಿಭಾಗದಲ್ಲಿ ದೆಹಲಿಯ ಮಿರಂದಾ ಮೊದಲ ರ‍್ಯಾಂಕ್‌, ಮಹಿಳೆಯರಿಗಾಗಿ ಇರುವ ದೆಹಲಿಯ ಲೇಡಿ ಶ್ರೀ ರಾಮ ಕಾಲೇಜು ಎರಡನೇ ರ‍್ಯಾಂಕ್‌ ಮತ್ತು ಚೆನ್ನೈನ ಲೊಯೊಲಾ ಕಾಲೇಜು ಮೂರನೇ ರ‍್ಯಾಂಕ್‌ ಪಡೆದಿದೆ.

ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌ ಅನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT