ಭಾನುವಾರ, ಜುಲೈ 3, 2022
25 °C

ಪುಲ್ವಾಮ: ಭದ್ರತಾ ಪಡೆ ಮೇಲೆ ದಾಳಿ ಮಾಡಿದ ಉಗ್ರನ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಶರಣಾಗಿದ್ದ ಉಗ್ರನೊಬ್ಬ ಕಾನ್‌ಸ್ಟೆಬಲ್‌ ಮೇಲೆ ಗುಂಡು ಹಾರಿಸಿ, ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸುವ ವೇಳೆ ಮೃತಪಟ್ಟಿದ್ದಾನೆ.

ಜಮ್ಮು ಮತ್ತು ಕಾಶ್ಮೀರದ ಪುಲ್ಪಾಮ ಜಿಲ್ಲೆಯ ಟ್ರಾಲ್‌ ಪ್ರದೇಶದ ವಿಶೇಷ ಕಾರ್ಯಾಚರಣೆ ಪಡೆಯ (ಎಸ್‌ಎಜಿ) ಕ್ಯಾಂಪ್‌ನಲ್ಲಿ ಬುಧವಾರ ರಾತ್ರಿ ಈ ಘಟನೆ ಸಂಭವಿಸಿದೆ. ಮೊಹಮ್ಮದ್‌ ಅಮೀನ್‌ ಮಲಿಕ್‌ ಎಂಬಾತ ಮೃತಪಟ್ಟ ಉಗ್ರ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾನ್‌ಸ್ಟೆಬಲ್‌ ಅಮ್ಜಿದ್‌ ಖಾನ್‌ ಅವರ ರೈಫಲ್‌ ಕಸಿದುಕೊಂಡ ಉಗ್ರ ಮಲಿಕ್‌, ಕಾನ್‌ಸ್ಟೆಬಲ್‌ ಮೇಲೆ ಗುಂಡು ಹಾರಿಸಿದ್ದನು. ನಂತರ ಶಿಬಿರದಲ್ಲಿ ಬಚ್ಚಿಟ್ಟುಕೊಂಡಿದ್ದನು. ಆತನ ಶರಣಾಗತಿಗೆ ನಡೆದ ಮನವೊಲಿಸುವ ಪ್ರಯತ್ನಗಳು ವಿಫಲಗೊಂಡವು.

ಬಳಿಕ ಏಕಾಏಕಿ ಮಲಿಕ್‌ ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದನು. ಈ ವೇಳೆ ನಡೆದ ಪ್ರತಿದಾಳಿಯಲ್ಲಿ ಆತ ಹತನಾದ. ಗಾಯಗೊಂಡಿರುವ ಕಾನ್‌ಸ್ಟೆಬಲ್‌ ಖಾನ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ... ಮೆಹುಲ್‌ ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮಿನಿಕಾ ಮ್ಯಾಜಿಸ್ಟ್ರೇಟ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು