ತಮಿಳುನಾಡಿನ 'ಜೀಸಸ್ ಕಾಲ್ಸ್' ಮತ ಪ್ರಚಾರ ಸಂಸ್ಥೆ ಮೇಲೆ ಐಟಿ ದಾಳಿ

ಚೆನ್ನೈ: ತಮಿಳುನಾಡಿನ 'ಜೀಸಸ್ ಕಾಲ್ಸ್' ಮತ ಪ್ರಚಾರ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿದೆ. ಸಂಸ್ಥೆಗೆ ಸೇರಿದ 28 ಸ್ಥಳಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸಂಸ್ಥೆ ತೆರಿಗೆ ವಂಚನೆೆಯಲ್ಲಿ ಭಾಗಿಯಾಗಿದೆಯೇ ಎಂದು ಪರಿಶೀಲಿಸಲು ಬುಧವಾರ ಬೆಳಿಗ್ಗೆ ಈ ದಾಳಿ ಆರಂಭವಾಗಿದೆ ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿವೆ.
ದಿವಂಗತ ಡಿಜಿಎಸ್ ದಿನಕರನ್ ಅವರು ಸಂಸ್ಥೆಯನ್ನು ಸ್ಥಾಪಿಸಿದ್ದು, ಸದ್ಯ ಅವರ ಮಗ ಪಾಲ್ ದಿನಕರನ್ ನೋಡಿಕೊಳ್ಳುತ್ತಿದ್ದಾರೆ. ಚೆನ್ನೈನ ‘ಜೀಸಸ್ ಕಾಲ್ಸ್’ಗೆ ಸೇರಿದ ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ. ಇದರ ಜೊತೆಗೆ, ಕೊಯಮತ್ತೂರಿನಲ್ಲಿರುವ ದಿನಕರನ್ ಕುಟುಂಬ ನಡೆಸುತ್ತಿರುವ ಕಾರುಣ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸಸ್ ಮೇಲೂ ದಾಳಿ ನಡೆದಿದೆ.
ಪಾಲ್ ದಿನಕರನ್ ತಮಿಳುನಾಡಿನ ಪ್ರಮುಖ ಧರ್ಮ ಪ್ರಚಾರಕರಾಗಿದ್ದು, ಗಮನಾರ್ಹ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿದ್ದಾರೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ...
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.