ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಹುಟ್ಟುಹಬ್ಬದಂದು 2.5 ಕೋಟಿ ಡೋಸ್ ಲಸಿಕೆ ನೀಡಿಕೆ: ವಿಶ್ವ ದಾಖಲೆ

Last Updated 18 ಸೆಪ್ಟೆಂಬರ್ 2021, 2:27 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಪ್ರತಿಪಕ್ಷಗಳು ನಿರುದ್ಯೋಗ ದಿನವಾಗಿ ಆಚರಿಸಿರುವ ಮಧ್ಯೆಯೇ, ದೇಶದಾದ್ಯಂತ ಶುಕ್ರವಾರ ಒಂದೇ ದಿನ 2.5 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಈ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಿದೆ.

ಈ ಹಿಂದೆ, ಚೀನಾದಲ್ಲಿ ಒಂದೇ ದಿನ 2.43 ಕೋಟಿ ಡೋಸ್ ಲಸಿಕೆ ನೀಡಿದ್ದು ಈವರೆಗಿನ ದಾಖಲೆಯಾಗಿತ್ತು.

ಮೋದಿ ಜನ್ಮದಿನದ ಪ್ರಯುಕ್ತ ಬಿಜೆಪಿ ಅಧಿಕಾರದಲ್ಲಿರುವ ವಿವಿಧ ರಾಜ್ಯ ಸರ್ಕಾರಗಳು ಮೆಗಾ ಲಸಿಕಾ ಅಭಿಯಾನ ನಡೆಸಿದ್ದವು.

‘ಪ್ರಧಾನಿಯವರ ಜನ್ಮದಿನದಂದು ಭಾರತವು ಇತಿಹಾಸ ರಚಿಸಿದೆ. 2.5 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡುವ ಮೂಲಕ ವಿಶ್ವದ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆದಿದೆ. ಇದು ಆರೋಗ್ಯ ಕಾರ್ಯಕರ್ತರ ದಿನ. ಅವರಿಗೆ ಧನ್ಯವಾದಗಳು’ ಎಂದು ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಟ್ವೀಟ್ ಮಾಡಿದ್ದಾರೆ.

ಬಿಹಾರ ಟಾಪ್, ಮುಂಚೂಣಿಯಲ್ಲಿ ಕರ್ನಾಟಕ

ಮೆಗಾ ಲಸಿಕಾ ಅಭಿಯಾನ ದಿನ ಅತಿಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಸಾಲಿನಲ್ಲಿ ಬಿಹಾರ ಅಗ್ರ ಸ್ಥಾನದಲ್ಲಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಬಿಹಾರದಲ್ಲಿ ರಾತ್ರಿ 11.20ರ ವೇಳೆಗೆ 29,38,653 ಡೋಸ್ ಲಸಿಕೆ ನೀಡಲಾಗಿದೆ.

ಕರ್ನಾಟಕದಲ್ಲಿ ರಾತ್ರಿ 12 ಗಂಟೆ ವೇಳೆಗೆ 29,09,163 ಡೋಸ್ ಲಸಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT