ನವದೆಹಲಿ: ಅಫ್ಗಾನಿಸ್ತಾನದ ಕಾಬೂಲ್ ಬಳಿ, ಕಾಬೂಲ್ ನದಿಗೆ ಶಾಹತೂತ್ ಅಣೆಕಟ್ಟು ಕಟ್ಟಲು ಭಾರತವು ನೆರವು ನೀಡಲಿದೆ. ಈ ಸಂಬಂಧ ಎರಡೂ ದೇಶಗಳ ನಡುವಣ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.

ಕಾಬೂಲ್ ನದಿಗೆ ಅಣೆಕಟ್ಟು ಕಟ್ಟುವುದನ್ನು ಪಾಕಿಸ್ತಾನವು ವಿರೋಧಿಸುತ್ತಲೇ ಇತ್ತು. ಈಗ ಒಪ್ಪಂದ ಆಗಿರುವುದರಿಂದಪಾಕಿಸ್ತಾನವು ಮತ್ತೆ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇದೆ.

‘ತಾಲಿಬಾನ್ ಉಗ್ರರ ಹಾವಳಿಯಿಂದ ತತ್ತರಿಸಿದ್ದ ಅಫ್ಗಾನಿಸ್ತಾನವನ್ನು ಮರುನಿರ್ಮಿಸುವ ಯೋಜನೆಯ ಭಾಗವಾಗಿ ಭಾರತವು ಈ ಅಣೆಕಟ್ಟು ನಿರ್ಮಾಣಕ್ಕೆ ಬೆಂಬಲ ನೀಡಿದೆ. ಅಫ್ಗಾನಿಸ್ತಾನದ 34 ಪ್ರಾಂತಗಳಲ್ಲೂ ಭಾರತವು ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಇದಕ್ಕಾಗಿ ಈವರೆಗೆ₹ 22,200 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಈಗ, ₹ 592 ಕೋಟಿ ವೆಚ್ಚದಲ್ಲಿ ಇನ್ನೂ 100 ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.