ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.5 ಕೋಟಿ ನಾಗರಿಕರಿಂದ ರಾಷ್ಟ್ರಗೀತೆ ಗಾಯನ: ದಾಖಲೆ ಬರೆದ ಭಾರತೀಯರು

Last Updated 14 ಆಗಸ್ಟ್ 2021, 17:20 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಭಾರತೀಯರು ರಾಷ್ಟ್ರಗೀತೆಯನ್ನು ಒಟ್ಟಾಗಿ ಹಾಡಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ.

ಈ ವರೆಗೆ 1.5 ಕೋಟಿ ಮಂದಿ ರಾಷ್ಟ್ರಗೀತೆ ಹಾಡಿ ವಿಡಿಯೊಗಳನ್ನು ಸರ್ಕಾರದ ವೆಬ್‌ಸೈಟ್‌ rashtragaan.inಗೆ ಅಪ್ಲೋಡ್‌ ಮಾಡಿದ್ದಾರೆ ಎಂದು 'ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೊ (ಪಿಐಬಿ)' ತಿಳಿಸಿದೆ.

ಜುಲೈ 25 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್ ನಲ್ಲಿ’ ಮಾತಾಡುತ್ತಾ, ದೇಶದ ನಾಗರಿಕರು ರಾಷ್ಟ್ರಗೀತೆಯನ್ನು ಒಟ್ಟಿಗೆ ಹಾಡಲು ಕರೆ ನೀಡಿದ್ದರು. ಮೋದಿ ನೀಡಿದ ಕರೆಗೆ ಓಗೊಟ್ಟಿರುವ ಜನ ರಾಷ್ಟ್ರಗೀತೆ ಹಾಡಿ ವಿಡಿಯೊವನ್ನು ಅಪ್ಲೋಡ್‌ ಮಾಡಿದ್ದಾರೆ. ಈ ಮೂಲಕ ದೇಶದ ನಾಗರಿಕರು ದಾಖಲೆ ಬರೆದಿದ್ದಾರೆ.

ನಾಗರಿಕರು ರಾಷ್ಟ್ರಗೀತೆ ‘ಜನ ಗಣ ಮನ’ ಹಾಡಿ, ಅದನ್ನು ವಿಡಿಯೊ ಮಾಡಿ, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಆಗಸ್ಟ್ 15 ರ ವರೆಗೆ ಸಂಸ್ಕೃತಿ ಇಲಾಖೆ ತಿಳಿಸಿತ್ತು.

ಖ್ಯಾತ ಕಲಾವಿದರು, ಪ್ರಸಿದ್ಧ ವಿದ್ವಾಂಸರು, ಹಿರಿಯ ಅಧಿಕಾರಿಗಳು, ಕೆಚ್ಚೆದೆಯ ಸೈನಿಕರು, ರೈತರು, ಕಾರ್ಮಿಕರು, ಸೇರಿದಂತೆ ದೇಶದ ಎಲ್ಲ ಭಾಗಗಳ ಜನರೂ ರಾಷ್ಟ್ರಗೀತೆಯನ್ನು ಹಾಡಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ರಾಷ್ಟ್ರಗೀತೆಯನ್ನು ಹಾಡಿ, ಅಪ್ಲೋಡ್‌ ಮಾಡುವ ಮೂಲಕ ತಮ್ಮ ಮನಸ್ಸು ಭಾರತದೊಂದಿಗೆ ನೆಲೆಸಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT